ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ಧನುಷ್ ಇದೀಗ ಸ್ಟಾರ್ ನಟಿ ಮೃಣಾಲ್ ಠಾಕೂರ್ ಜೊತೆ ಎರಡನೇ ವಿವಾಹವಾಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ನಟ ಧನುಷ್ ಹಾಗೂ ನಟಿ ಮೃಣಾಲ್ ಠಾಕೂರ್ ಇತ್ತೀಚೆಗೆ ಹಲವಾರು ವೇದಿಕೆಯಲ್ಲಿ, ಪಾರ್ಟಿಗಳಲ್ಲಿ, ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಧನುಷ್ ಹಾಕಿರುವ ಪೋಸ್ಟ್‌ಗಳಿಗೆ ಮೃಣಾಲ್ ಲೈಕ್ ಕೊಡೋದು ಕಮೆಂಟ್ಸ್ ಹಾಕೋದು ಮಾಡುತ್ತಿದ್ದರು. ಇವೆಲ್ಲ ಘಟನೆಗಳು ಅವರಿಬ್ಬರ ಮಧ್ಯೆ ಗಾಸಿಪ್ ಸೃಷ್ಟಿಸಿತ್ತು.

ಹಾಗೆಯೇ ಮೃಣಾಲ್ ಹಾಗೂ ಧನುಷ್ ಸನ್ ಆಫ್ ಸರ್ಧಾರ್-2 ಸಿನಿಮಾದ ಪ್ರೀಮಿಯರ್‌ನಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡ ಬಳಿಕ ಇಬ್ಬರೂ ಫೆಬ್ರವರಿ 14ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.