ಸಿದ್ದಾಪುರ: ಸೌಹಾರ್ದ ಸೊಸೈಟಿ ಉದ್ಯೋಗಿ ನಾಪತ್ತೆ

ಕುಂದಾಪುರ: ತಾಲೂಕಿನ ಸಿದ್ದಾಪುರದ ಬ್ರಾಹ್ಮೀ ದುರ್ಗಾಪರಮೇಶ್ವರಿ ಸೌಹಾರ್ದ ಸೊಸೈಟಿಯಲ್ಲಿ ಜೂನಿಯರ್ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೋರ್ವ ಇಂದು ಬೆಳಿಗ್ಗೆಯಿಂದ ನಿಗೂಢವಾಗಿ ಕಾಣೆಯಾಗಿರುವ ಘಟನೆ ವರದಿಯಾಗಿದೆ.

ಆಜ್ರಿ ಗ್ರಾಮದ ನಿವಾಸಿ ಅಮರ್ ಶೆಟ್ಟಿ ಕಾಣೆಯಾದ ವ್ಯಕ್ತಿ. ಇವರು ಮಂಗಳವಾರ (ಮಾ. 03, 2026) ಬೆಳಿಗ್ಗೆ 08:30 ಗಂಟೆಗೆ ಎಂದಿನಂತೆ ತಮ್ಮ ಕಪ್ಪು ಬಣ್ಣದ ಹೋಂಡಾ ಶೈನ್ ಬೈಕ್ (ನಂಬರ್: KA 20 EU 7840) ನಲ್ಲಿ ಮನೆಯಿಂದ ಕೆಲಸಕ್ಕೆಂದು ಹೊರಟಿದ್ದರು. ಆದರೆ, ಅವರು ಸೊಸೈಟಿಗೂ ತಲುಪದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಚಹರೆ ವಿವರ:
6 ಅಡಿ ಎತ್ತರವಿರುವ ಅಮರ್ ಶೆಟ್ಟಿ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದ ಸಮಯದಲ್ಲಿ ಇವರು ಬಿಳಿ ಬಣ್ಣದ ಚೆಕ್ಸ್ ಶರ್ಟ್ ಹಾಗೂ ನಸು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ತಿಳಿದುಬಂದಿದೆ.

ಮಾಹಿತಿ ನೀಡಲು ವಿನಂತಿ:
ಈ ಚಹರೆಯ ವ್ಯಕ್ತಿ ಅಥವಾ ಮೇಲೆ ತಿಳಿಸಿದ ಬೈಕ್ ಎಲ್ಲಾದರೂ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಶಂಕರನಾರಾಯಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

ಸಂಪರ್ಕ ಸಂಖ್ಯೆಗಳು:
ಪೊಲೀಸ್ ಸಬ್ ಇನ್ಸ್ಪೆಕ್ಟರ್: 9480805456
ಬೀಟ್ ಪೊಲೀಸ್: 73488 98417

error: Content is protected !!