ಬಂಟ್ವಾಳ: ಕಳೆದ 23 ವರ್ಷಗಳಿಂದ ಟೋಲ್ ಸಂಗ್ರಹಿಸುತ್ತಿರುವ, ಅಂತರದ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿರುವ ಬ್ರಹ್ಮರಕೋಟ್ಲು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ, ಮಾಜಿ ಸಚಿವ ಬಿ.ರಮಾನಾಥ ರೈ ನೇತ್ರತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಧರಣಿ ನಡೆಯಿತು.

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ನಿಯಮಬಾಹಿರವಾದ, ಕಾನೂನು ಬಾಹಿರವಾದ ಸುಲಿಗೆಯ ಕೇಂದ್ರವಾಗಿರುವ ಬ್ರಹ್ಮರಕೋಟ್ಲು ಟೋಲ್ ತೆರವು ಹೋರಾಟಕ್ಕೆ ಎಲ್ಲರ ಸಹಮತವಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಟೋಲ್ ಗೇಟ್ ವಿರುದ್ದ ಹೋರಾಟ ಸಮಿತಿಯ ಪ್ರಮುಖ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಸಹಿತ ಹೆದ್ದಾರಿ ಅಭಿವೃದ್ಧಿ ಕುರಿತು ಯಾವುದೇ ನಿಯಮಗಳನ್ನು ಪಾಲಿಸದೆ, ನಿರಂತರವಾಗಿ ಜನರಿಗೆ ದ್ರೋಹ ಬಗೆಯುತ್ತಿದೆ. ಕನಿಷ್ಠ ಜನರ ಅಹವಾಲುನ್ನು ಸ್ವೀಕರಿಸುವ ಸೌಜನ್ಯವು ಪ್ರಾಧಿಕಾರಕ್ಕಿಲ್ಲ ಎಂದು ಆರೋಪ ಮಾಡಿದರು.

ಪ್ರಮುಖರಾದ ಮೋಹನ್ ಶೆಟ್ಟಿ, ಶೇಖರ್, ಪದ್ಮರಾಜ್, ಎಂ.ಜಿ.ಹೆಗ್ಡೆ, ಧರಣೇಂದ್ರ ಕುಮಾರ್, ಮಮತಾ ಗಟ್ಟಿ, ಪಿಯೂಸ್ ರೊಡ್ರಿಗಸ್, ಬಿ.ಎಮ್.ಭಟ್,ಸುನಿಲ್ ಕುಮಾರ್ ಬಜಲ, ಅನ್ವರ್ ಸಾದತ್, ಸುಹೈಲ್ ಖಂದಕ್ ಪ್ರಮುಖರು ಉಪಸ್ಥಿತರಿದ್ದರು.