ಉಡುಪಿ: ಹಿಂದೂ ಮುಖಂಡನಿಗೆ ಚೂರಿ ಇರಿತ, ಐವರು ಆರೆಸ್ಟ್!

ಮಲ್ಪೆ: ಇಲ್ಲಿನ ಹಿಂದೂ ಯುವಸೇನೆ ಮುಖಂಡ ಮಂಜು ಕೊಳ ಎಂಬವರಿಗೆ ತಂದವೊಂದು ಚೂರಿಯಿಂದ ಇರಿದ ಘಟನೆ ಇಂದು ತಡರಾತ್ರಿ ನಡೆದಿದ್ದು ತಕ್ಷಣವೇ ಕಾರ್ಯ ಪ್ರವೃತ್ತರಾದ ಉಡುಪಿ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣವೊಂದರ ರಾಜಿ ಪಂಚಾತಿಕೆ ನಡೆಸಲು ಮಂಜು ಕೊಳ ಹೋಗಿದ್ದ ವೇಳೆ ತಂಡ ದಾಳಿ ನಡೆಸಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಂಜು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!