ಎಲಿಯನ್‌ಗಳ ಸುಳಿವು ಪತ್ತೆ- ಹುಡುಕಾಟ ಶುರು! ಮನುಷ್ಯರಿಗೆ ವಾಸಯೋಗ್ಯ ಹೊಸ ಜಗತ್ತುಗಳತ್ತ ನಾಸಾದ ‘ರೋಮನ್’ ಕಣ್ಣು

ನಾವು ಬ್ರಹ್ಮಾಂಡದಲ್ಲಿ ಒಬ್ಬರೇನಾ? ಎಲಿಯನ್‌ಗಳು ನಿಜವಾಗಿಯೂ ಅಸ್ತಿತ್ವದಲ್ಲಿವೆಯಾ? ಮನುಷ್ಯರು ಭವಿಷ್ಯದಲ್ಲಿ ಭೂಮಿಯ ಹೊರತಾಗಿ ಇನ್ನೊಂದು ಗ್ರಹದಲ್ಲಿ ಬದುಕಬಹುದಾ? ಇಂತಹ ಮಾನವಕುಲದ ಶತಮಾನಗಳ ಪ್ರಶ್ನೆಗಳಿಗೆ ಉತ್ತರ ಹುಡುಕುವ ದಿಕ್ಕಿನಲ್ಲಿ ನಾಸಾ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ನಾಸಾದ ಹೊಸ ಪೀಳಿಗೆಯ ಬಾಹ್ಯಾಕಾಶ ದೂರದರ್ಶಕ ನ್ಯಾನ್ಸಿ ಗ್ರೇಸ್ ರೋಮನ್ ಸ್ಪೇಸ್ ಟೆಲಿಸ್ಕೋಪ್ ಶೀಘ್ರದಲ್ಲೇ ಉಡಾವಣೆಗೆ ಸಜ್ಜಾಗಿದ್ದು, ಎಲಿಯನ್‌ಗಳ ಸುಳಿವು ಹಾಗೂ ಮನುಷ್ಯರಿಗೆ ವಾಸಯೋಗ್ಯ ಗ್ರಹಗಳ ಹುಡುಕಾಟಕ್ಕೆ ಹೊಸ ದಾರಿ ತೆರೆದುಕೊಳ್ಳಲಿದೆ.

A pair of scientists stand in front of the fully completed Roman space telescope

ರೋಮನ್ ದೂರದರ್ಶಕವು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಬ್ಬಲ್ ಮತ್ತು ಜೇಮ್ಸ್ ವೆಬ್ ದೂರದರ್ಶಕಗಳೊಂದಿಗೆ ಜೊತೆಯಾಗಿ ಕೆಲಸ ಮಾಡಲಿದೆ. ಇದರ ಅತ್ಯಂತ ವಿಶೇಷತೆ ಎಂದರೆ, ಲಕ್ಷಾಂತರ ನಕ್ಷತ್ರಗಳ ಸುತ್ತಲೂ ತಿರುಗುವ ಗ್ರಹಗಳನ್ನು ಒಂದೇ ಸಮಯದಲ್ಲಿ ಗುರುತಿಸುವ ಸಾಮರ್ಥ್ಯ. ಭೂಮಿಯಂತೆ ನೀರು, ವಾತಾವರಣ ಮತ್ತು ಸಮತಾಪಮಾನ ಇರುವ ಗ್ರಹಗಳೇ ಜೀವದ ಸಾಧ್ಯತೆಯ ಕೇಂದ್ರಬಿಂದು. ಅಂತಹ ಗ್ರಹಗಳ ಪತ್ತೆಯೇ ಎಲಿಯನ್‌ಗಳ ಅಸ್ತಿತ್ವಕ್ಕೆ ಮೊದಲ ಸುಳಿವು ಎಂದು ವಿಜ್ಞಾನಿಗಳು ನಂಬಿದ್ದಾರೆ.

Scientists Are Building a Real-Life Version of the Starship Enterprise's Life Scanner | Space

ರೋಮನ್‌ನಲ್ಲಿ ಅಳವಡಿಸಿರುವ ಕೊರೊನಾಗ್ರಾಫ್ ಉಪಕರಣ ಈ ಹುಡುಕಾಟದ ‘ಗುಪ್ತ ಅಸ್ತ್ರ’ವಾಗಿದೆ. ಸಾಮಾನ್ಯವಾಗಿ ನಕ್ಷತ್ರಗಳ ಪ್ರಖರ ಬೆಳಕಿನ ಕಾರಣ ಅವುಗಳ ಸುತ್ತಲಿನ ಗ್ರಹಗಳು ಕಾಣುವುದಿಲ್ಲ. ಆದರೆ ಈ ಉಪಕರಣವು ನಕ್ಷತ್ರದ ಬೆಳಕನ್ನೇ ತಡೆಯುವ ಮೂಲಕ, ಅದರ ಸುತ್ತ ತಿರುಗುವ ಗ್ರಹಗಳನ್ನು ನೇರವಾಗಿ ಚಿತ್ರಿಸುವ ಶಕ್ತಿ ಹೊಂದಿದೆ. ಇದರಿಂದ ವಿಜ್ಞಾನಿಗಳು ಆ ಗ್ರಹಗಳ ವಾತಾವರಣದಲ್ಲಿ ಆಮ್ಲಜನಕ, ಕಾರ್ಬನ್ ಡೈಆಕ್ಸೈಡ್, ನೀರಾವಿ ಅಥವಾ ಜೀವದ ರಾಸಾಯನಿಕ ಗುರುತುಗಳಿವೆಯೇ ಎಂಬುದನ್ನು ಪರಿಶೀಲಿಸಬಹುದು.

12 strange reasons humans haven't found alien life yet | Live Science

ವಿಜ್ಞಾನಿಗಳ ಅಂದಾಜಿನ ಪ್ರಕಾರ, ರೋಮನ್ ತನ್ನ ಮೊದಲ ಐದು ವರ್ಷಗಳ ಕಾರ್ಯಾಚರಣೆಯಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಹೊರಗ್ರಹಗಳನ್ನು ಪತ್ತೆಹಚ್ಚಬಹುದು. ಇದು ಇಂದಿನವರೆಗೆ ಪತ್ತೆಯಾದ ಗ್ರಹಗಳಿಗಿಂತ ಅನೇಕ ಪಟ್ಟು ಹೆಚ್ಚು. ಈ ಗ್ರಹಗಳಲ್ಲಿ ಕೆಲವಾದರೂ ಭೂಮಿಯಂತೆಯೇ ವಾಸಯೋಗ್ಯ ಪರಿಸ್ಥಿತಿಗಳನ್ನು ಹೊಂದಿದ್ದರೆ, ಮಾನವಕುಲದ ಇತಿಹಾಸವೇ ಹೊಸ ತಿರುವು ಪಡೆಯಲಿದೆ. ಎಲಿಯನ್ ಜೀವಿಗಳ ಅಸ್ತಿತ್ವಕ್ಕೆ ಇದು ಪ್ರಬಲ ಸಾಕ್ಷಿಯಾಗುವ ಸಾಧ್ಯತೆಯೂ ಇದೆ.

ಇದಕ್ಕಿಂತಲೂ ಮಹತ್ವದ ಅಂಶವೆಂದರೆ, ರೋಮನ್ ದೂರದರ್ಶಕವು ಮಿಲ್ಕಿ ವೇ ನಕ್ಷತ್ರಮಂಡಲದ ಮಧ್ಯಭಾಗವನ್ನು ಅತ್ಯಂತ ವಿವರವಾಗಿ ನಕ್ಷೆಗೊಳಿಸಲಿದೆ. ಅಲ್ಲಿ ಕೋಟ್ಯಾಂತರ ನಕ್ಷತ್ರಗಳು, ಅನೇಕ ಅಜ್ಞಾತ ಗ್ರಹಗಳು ಮತ್ತು ಜೀವ ಉದ್ಭವಕ್ಕೆ ಅನುಕೂಲಕರ ವಾತಾವರಣ ಇರುವ ವ್ಯವಸ್ಥೆಗಳು ಅಡಗಿರಬಹುದೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮಾನವನು ಭವಿಷ್ಯದಲ್ಲಿ ವಾಸಿಸಲು ಯೋಗ್ಯವಾದ ಹೊಸ ಗ್ರಹಗಳ ಹುಡುಕಾಟಕ್ಕೂ ಈ ಅಧ್ಯಯನ ನೆರವಾಗಲಿದೆ.

ನಾಸಾ ವಿಜ್ಞಾನಿಗಳ ಮಾತಿನಂತೆ, “ನಾವು ಒಬ್ಬರೇ ಅಲ್ಲವೇ?” ಎಂಬ ಪ್ರಶ್ನೆಗೆ ಉತ್ತರ ಸಿಗುವ ದಿನ ಈಗ ದೂರವಿಲ್ಲ. ರೋಮನ್ ದೂರದರ್ಶಕ ಸಂಗ್ರಹಿಸುವ ದತ್ತಾಂಶದ ಪ್ರಮಾಣವೇ ಅದರ ಸಾಮರ್ಥ್ಯಕ್ಕೆ ಸಾಕ್ಷಿ—ಐದು ವರ್ಷಗಳಲ್ಲಿ 20,000 ಟೆರಾಬೈಟ್‌ಗಿಂತ ಹೆಚ್ಚು ಮಾಹಿತಿಯನ್ನು ಇದು ಭೂಮಿಗೆ ಕಳುಹಿಸಲಿದೆ. ಈ ಮಾಹಿತಿಯ ವಿಶ್ಲೇಷಣೆಯಿಂದ ಎಲಿಯನ್ ಜೀವಿಗಳ ಸುಳಿವು ಸಿಕ್ಕರೂ ಅಚ್ಚರಿಯಿಲ್ಲ ಎಂಬುದು ವಿಜ್ಞಾನಿಗಳ ನಿರೀಕ್ಷೆ.

A photo of researchers stood in front of the Roman telescope's mirror

ಎಲ್ಲವೂ ಯೋಜನೆಯಂತೆ ನಡೆದರೆ, ರೋಮನ್ ದೂರದರ್ಶಕವು 2026ರ ಅಂತ್ಯದೊಳಗೆ ಬ್ರಹ್ಮಾಂಡದ ರಹಸ್ಯಗಳನ್ನು ತೆರೆದಿಡಲು ಆರಂಭಿಸಲಿದೆ. ಮಾನವಕುಲ ಭೂಮಿಯ ಮಿತಿಯನ್ನು ಮೀರಿ, ಮತ್ತೊಂದು ವಾಸಯೋಗ್ಯ ಜಗತ್ತಿನ ಕನಸು ಕಾಣುವ ದಿನಗಳು ಈಗ ವಿಜ್ಞಾನಕಲ್ಪನೆಯಲ್ಲ, ವೈಜ್ಞಾನಿಕ ವಾಸ್ತವದತ್ತ ಸಾಗುತ್ತಿವೆ.

ಮೂಲ- ಲೈವ್‌ ಸೈನ್ಸ್

error: Content is protected !!