ಕಾರ್ಕಳ: ಸಾಣೂರು ಗ್ರಾಮದ ಮುದ್ದಣ್ಣ ನಗರದಲ್ಲಿ ಗುರುವಾರ ತಡರಾತ್ರಿ 1:30 ರ ವೇಳೆಗೆ ಭಾರೀ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಮನೆಯ ಗೋಡೆ, ಫರ್ನಿಚರ್, ವಾಷಿಂಗ್ ಮಷೀನ್ ಸೇರಿದಂತೆ ಹಲವಾರು ಸೊತ್ತುಗಳು ಸಂಪೂರ್ಣ ಹಾನಿಗೊಂಡಿವೆ. ಅದೃಷ್ಟವಶಾತ್, ಯಾರಿಗೂ ಗಾಯವಾಗಿಲ್ಲ.

ಸ್ಫೋಟವು ಅಡುಗೆ ಕೋಣೆಯ ಹೊರಭಾಗದ ಕೊಠಡಿಯಲ್ಲಿಯೇ ಸಂಭವಿಸಿದ್ದು, ಮನೆ ನಿವಾಸಿಗಳಿಗೆ ಈ ಅವಘಡವು ನಿಜಕ್ಕೂ ಶಾಕ್ ಆಗಿದೆ. ಮನೆಯ ಹೊರಭಾಗದಲ್ಲಿ ಸ್ಫೋಟ ಸಂಭವಿಸಿರುವುದರಿಂದ ಪರಿಸರದಲ್ಲಿ ಬರುವ ಜನರಿಗೂ ಭಯ ಹುಟ್ಟಿಸಿದೆ. ಘಟನೆಯಿಂದ ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಗ್ಯಾಸ್ ಸಿಲಿಂಡರ್ ಸ್ಫೋಟದ ನಿಖರ ಕಾರಣ ಇನ್ನೂ ತಿಳಿದುಬಿಲ್ಲ.
ಸಿಲಿಂಡರ್ ಬಳಕೆ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಮನೆಯೊಳಗೆ ಅಥವಾ ಮುಚ್ಚಿದ ಸ್ಥಳದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಸುರಕ್ಷಿತವಾಗಿ ನಿರ್ವಹಿಸದಿದ್ದರೆ, ಈ ರೀತಿಯ ಭೀಕರ ಘಟನೆ ಸಂಭವಿಸಬಹುದಾಗಿದೆ.