ಇಂದಿನಿಂದ ಐಸಿಸಿ ಅಂಡರ್ 19 ವಿಶ್ವಕಪ್ ಆರಂಭ !

ಜಿಂಬಾಬ್ವೆ: ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾಟವು ಇಂದಿನಿಂದ ಆರಂಭಗೊಳ್ಳಲಿದ್ದು, ಏಕದಿನ ಮಾದರಿಯ ಈ ವಿಶ್ವಕಪ್ ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯದಲ್ಲಿ ಸಾಗಲಿದೆ.

ಇದು 20 ತಂಡಗಳ ನಡುವಿನ ಪಂದ್ಯಾಟವಾಗಿದ್ದು, ಆರಂಭಿಕ ಪಂದ್ಯದಲ್ಲಿ ಭಾರತ ಅಮೆರಿಕ ಮುಖಾಮುಖಿ ಆಗಲಿವೆ. ಭಾರತ ‘ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಜ.17ರಂದು ಬಾಂಗ್ಲಾದೇಶ ವಿರುದ್ಧ, ಜ.24ರಂದು ನ್ಯೂಜಿಲ್ಯಾಂಡ್ ವಿರುದ್ಧ ಉಳಿದ ಲೀಗ್ ಪಂದ್ಯಗಳನ್ನು ಆಡಲಿದೆ. ಭಾರತೀಯ ಕಾಲಮಾನದಂತೆ ಪಂದ್ಯ ಅಪರಾಹ್ನ ಒಂದು ಗಂಟೆಗೆ ಆರಂಭವಾಗಲಿದೆ.

ಅಮೆರಿಕವನ್ನು ಭಾರತೀಯ ಮೂಲದ ಉತ್ಕರ್ಷ್ ಶ್ರೀವಾಸ್ತವ ಮುನ್ನಡೆಸಲಿದ್ದು, ಬಹುತೇಕ ಏಷ್ಯಾ ಮೂಲದ ಕ್ರಿಕೆಟಿಗರನ್ನೇ ಹೊಂದಿದೆ.

error: Content is protected !!