ಉಡುಪಿ: ಪಾದಚಾರಿಯೊಬ್ಬರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಎಡ ಕಾಲು ಸಂಪೂರ್ಣ ಮುರಿತಕ್ಕೊಳಗಾಗಿರುವ ಘಟನೆ ನಿಟ್ಟೂರು ಸಮೀಪ ರಾ.ಹೆ.ಯಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ ಮೌನೇಶ ನಾಯ್ಕ್ (46) ಕಾಲು ಮುರಿತಕ್ಕೆ ಒಳಗಾದ ಪಾದಚಾರಿ.
ಕಾಲು ಮುರಿತಕ್ಕೆ ಒಳಗಾದ ವ್ಯಕ್ತಿಯನ್ನು ಕೂಡಲೇ ವಿಶುಶೆಟ್ಟಿ ಅಂಬಲಪಾಡಿಯವರು ಸಾರ್ವಜನಿಕರ ಸಹಾಯದಿಂದ ತನ್ನ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸಂಚಾರಿ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.