
ಮಂಗಳೂರು: ವೋಟರ್ ಐಡಿ ಕಾರ್ಡ್ ನಲ್ಲಿ ನಿಮ್ಮ ಹಳೆಯ ಬ್ಲ್ಯಾಕ್ ಆಂಡ್ ವೈಟ್ (ಕಪ್ಪು-ಬಿಳುಪು) ಫೋಟೋ ಇದ್ದರೆ, ಅದನ್ನು ಕಲರ್ ಫೋಟೋಗೆ ಬದಲಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.


ವೋಟರ್ ಐಡಿಯಲ್ಲಿ ಫೋಟೋ ನವೀಕರಿಸುವ ವಿಧಾನ:
ಆನ್‌ಲೈನ್ ವಿಧಾನ: ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ https://voters.eci.gov.in/ ಅಥವಾ ‘Voter Helpline’ ಮೊಬೈಲ್ ಅಪ್ಲಿಕೇಶನ್ ಬಳಸಿ ನೇರವಾಗಿ ಅರ್ಜಿ ಸಲ್ಲಿಸಬಹುದು.
ನೇರ ವಿಧಾನ: ನಿಮ್ಮ ಪ್ರದೇಶದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಬಹುದು.
ಬೇಕಾಗುವ ದಾಖಲೆಗಳು:
ಹಳೆಯ ವೋಟರ್ ಐಡಿ
ಆಧಾರ್ ಕಾರ್ಡ್
ಪಾಸ್ ಪೋರ್ಟ್ ಸೈಜ್ ಫೋಟೋ
ಮೊಬೈಲ್ ಸಂಖ್ಯೆ(OTP)