ಹೋಬರ್ಟ್: ಭಾರತ ಮತ್ತು ಆಸ್ಟ್ರೇಲಿಯಾ ವನಿತಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಇಂದು(ಫೆ.27) ನಡೆಯಲಿದೆ.

3 ಪಂದ್ಯಗಳ ಸರಣಿಯ ಆರಂಭಿಕ ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯಾ ಗೆದ್ದಿರುವ ಕಾರಣ, ಸರಣಿ ಉಳಿಸಿಕೊಳ್ಳಲು ಹರ್ಮನ್‌ಪ್ರೀತ್ ಕೌರ್ ಪಡೆಗೆ ಈ ಪಂದ್ಯದಲ್ಲಿನ ಗೆಲುವು ಮುಖ್ಯವೆನಿಸಿದೆ. ಆಸ್ಟ್ರೇಲಿಯಾ ವನಿತಾ ತಂಡದ ವಿರುದ್ಧ ಭಾರತ ಎಂದೂ ಏಕದಿನ ದ್ವಿಪಕ್ಷೀಯ ಸರಣಿ ಗೆದ್ದಿಲ್ಲವಾದ್ದರಿಂದ ಇಂದಿನ ಪಂದ್ಯ ಗೆದ್ದರೆ ಭಾರತದ ಹೆಸರಿಗೆ ದಾಖಲೆ ಸೇರ್ಪಡೆಯಾಗಲಿದೆ.
