ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ ಮದುವೆ ಡೇಟ್‌ ಫಿಕ್ಸ್..!‌!

ಬೆಂಗಳೂರು: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದು, ಇದೀಗ ಅವರ ಮದುವೆ ಕುರಿತು ಹೊಸ ಸುದ್ದಿ ಹೊರಬಿದ್ದಿದೆ. ಕಳೆದ ಅಕ್ಟೋಬರ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥವನ್ನು ಗುಟ್ಟಾಗಿ ಹೈದರಾಬಾದ್‌ನಲ್ಲಿ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಫೆಬ್ರವರಿ ರಶ್ಮಿಕಾ ಹಾಗೂ ವಿಜಯ್‌ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ ಎಂದೂ ಹೇಳಲಾಗಿತ್ತು. ಈ ಮಧ್ಯೆ  ಮದುವೆ ದಿನಾಂಕ ಹಾಗೂ ಮದುವೆ ನಡೆಯುವ ಸ್ಥಳ ಎಲ್ಲಿ ಎನ್ನುವುದನ್ನು ರಿವೀಲ್‌ ಆಗಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ 2026 ಫೆಬ್ರವರಿ 26 ರಂದು ಮದುವೆ ನಡೆಯಲಿದೆ ಎಂಬ ಮಾಹಿತಿಯೊಂದು ಹೊರ ಬಿದ್ದಿದೆ. ನಿಶ್ಚಿತಾರ್ಥ ಕಾರ್ಯಕ್ರಮದಂತೆ ವಿವಾಹ ಸಮಾರಂಭ ಕೂಡ ಕುಟುಂಬಸ್ಥರ ಹಾಗೂ ಆಪ್ತರ ಸಮ್ಮುಖದಲ್ಲಷ್ಟೇ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಜೋಡಿ 2026 ರ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಅದ್ಧೂರಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಮದುವೆಯ ಸಿದ್ಧತೆಗಳು ಕೂಡ ಈಗಾಗಲೇ ಶುರುವಾಗಿದೆ ಎಂದು ವರದಿಯಾಗಿದೆ.

ರಶ್ಮಿಕಾ ಮಂದಣ್ಣ ಅವರು ಕನ್ನಡ ಬ್ಲಾಕ್‌ಬಸ್ಟರ್ ಕಿರಿಕ್ ಪಾರ್ಟಿ ಚಿತ್ರದ ಸಹನಟ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2017 ರಲ್ಲಿ ಇಬ್ಬರೂ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು, ಆದರೆ ಹೊಂದಾಣಿಕೆಯ ಸಮಸ್ಯೆಗಳನ್ನು ಉಲ್ಲೇಖಿಸಿ 2018 ರಲ್ಲಿ ಬೇರ್ಪಟ್ಟರು.

ವಿಜಯ್ ಮತ್ತು ರಶ್ಮಿಕಾ ಮೊದಲ ಬಾರಿಗೆ 2018 ರಲ್ಲಿ ಗೀತಾ ಗೋವಿಂದಂ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು, ಇದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ಎಂದು ಸಾಬೀತಾಯಿತು. ಮುಂದಿನ ವರ್ಷ ಡಿಯರ್ ಕಾಮ್ರೇಡ್‌ಗಾಗಿ ಅವರು ಮತ್ತೆ ಒಂದಾದರು. 2020 ರಲ್ಲಿ ಅವರ ಸಂಬಂಧದ ವದಂತಿಗಳು ಹರಡಲು ಪ್ರಾರಂಭಿಸಿದವು, ಹಾಗೆಯೇ ವಿಜಯ್‌ ದೇವರಕೊಂಡ ಪರಿಚಯವೇ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್‌ ಶೆಟ್ಟಿಯ ನಡುವಿನ ಬಿರುಕಿಗೆ ಕಾರಣವೆಂಬ ವದಂತಿಗಳು ಹರಡುತ್ತಿತ್ತು.

ಇದೀಗ ಈ ಜೋಡಿ ಈ ವರ್ಷದ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು , ಆದರೆ ಅವರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಲ್ಲಿಯೂ ಅಧಿಕೃತವಾಗಿ ದೃಢಪಡಿಸಿಲ್ಲ. ಇದೀಗ ಮದುವೆ ಮುಹೂರ್ತ ಫಿಕ್ಸ್ ಆಗಿದೆ.

error: Content is protected !!