ಮಂಗಳೂರಿನ 13 ಹೊಸ ರೂಟ್‌ಗಳಿಗೆ ಶೀಘ್ರದಲ್ಲೇ ಸರಕಾರಿ ಬಸ್‌ ಆರಂಭ!

ಮಂಗಳೂರು: ಮಂಗಳೂರು ನಗರದ 13 ರೂಟ್‌ಗಳಲ್ಲಿ ಶೀಘ್ರದಲ್ಲೇ ಸರಕಾರಿ ಬಸ್‌ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ.

ಡಿಎಂ ಅಧಿಸೂಚನೆಯಿಂದಾಗಿ ನಗರದ ಕೇಂದ್ರ ಭಾಗವಾದ ಸ್ಟೇಟ್‌ ಬ್ಯಾಂಕ್‌ನಿಂದ ಬಸ್‌ ಸಂಚಾರಕ್ಕೆ ಅವಕಾಶ ಇರಲಿಲ್ಲ. ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಅವರು ಈ ಅಧಿಸೂಚನೆಯನ್ನು ತೆರವು ಮಾಡಿದ್ದು, ಇದರಿಂದಾಗಿ ಸ್ಟೇಟ್‌ಬ್ಯಾಂಕ್‌ನಿಂದ ನೇರವಾಗಿ ಜಿಲ್ಲೆಯ ವಿವಿಧ ಕಡೆಗಳಿಗೆ ಬಸ್‌ ಸಂಚಾರ ಆರಂಭ ಮಾಡಬಹುದಾಗಿದೆ. ಹೊಸ ರೂಟ್‌ಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ ಸಿದ್ಧತೆ ನಡೆಸುತ್ತಿದೆ.

1991ರಲ್ಲಿ ನಗರ ಸಾರಿಗೆ ಬಸ್‌ಗಳಿಗೆ ಮತ್ತು 1994ರಲ್ಲಿ ಗ್ರಾಮಾಂತರ ಬಸ್‌ಗಳಿಗೆ ಸ್ಟೇಟ್‌ಬ್ಯಾಂಕ್‌ ಪ್ರವೇಶಿಸಲು ನಿರ್ಬಂಧ ವಿಧಿಸಿ ಡಿಎಂ ಅಧಿಸೂಚನೆ ಹೊರಡಿಸಲಾಗಿತ್ತು. 2013ರಲ್ಲಿ ಡಿಎಂ ಅಧಿಸೂಚನೆ ಪರಿಷ್ಕರಣೆ ಮಾಡಲಾಯಿತು. ಈ ಪ್ರಕಾರ ಕದ್ರಿ ಮಲ್ಲಿಕಟ್ಟೆ ಕೊನೆ ನಿಲ್ದಾಣ ಇದ್ದುದನ್ನು ನಂತೂರುವರೆಗೆ, ಕಂಕನಾಡಿ ಇದ್ದುದನ್ನು ಪಂಪ್‌ವೆಲ್‌, ಲೇಡಿಹಿಲ್‌ ಇದ್ದುದನ್ನು ಕೊಟ್ಟಾರ ಕ್ರಾಸ್‌ ಎಂದು ನಿಗದಿಪಡಿಸಲಾಗಿತ್ತು. ಇದರಿಂದಾಗಿ ಸ್ಟೇಟ್‌ಬ್ಯಾಂಕ್‌ ಕಡೆಯಿಂದ ಹೊಸ ಬಸ್‌ ಸಂಚರಿಸಲು ಅವಕಾಶ ಇರಲಿಲ್ಲ.

ಕೆಎಸ್ಸಾರ್ಟಿಸಿ ಪ್ರಸ್ತಾವಿತ ರೂಟ್‌ಗಳು

1. ಸ್ಟೇಟ್‌ಬ್ಯಾಂಕ್‌-ಬನತ್ತಡಿ-ಕಿನ್ಯಾ

2. ಮಂಗಳೂರು-ಕೆತ್ತಿಕಲ್‌-ತಾರಿಗುಡ್ಡೆ-ಪೊಳಲಿ

3. ಸ್ಟೇಟ್‌ಬ್ಯಾಂಕ್‌-ನಂತೂರು-ಫರಂಗಿಪೇಟೆ

4. ಸ್ಟೇಟ್‌ಬ್ಯಾಂಕ್‌-ತೊಕ್ಕೊಟ್ಟು-ದೇರಳಕಟ್ಟೆ-ಕೊಜಪಾಡಿ

5. ಮಂಗಳೂರು-ತೊಕ್ಕೊಟ್ಟು-ದೇರಳಕಟ್ಟೆ-ರಹಮತ್‌ನಗರ

6. ಸ್ಟೇಟ್‌ಬ್ಯಾಂಕ್‌-ತೊಕ್ಕೊಟ್ಟು-ಕುಂಪಲ

7. ಮಂಗಳೂರು-ಉಳಾಯಿಬೆಟ್ಟು-ಮಲ್ಲೂರು-ಪೊಳಲಿ

8. ಸ್ಟೇಟ್‌ಬ್ಯಾಂಕ್‌-ಶಕ್ತಿನಗರ-ಪ್ರೀತಿನಗರ

9. ಮಂಗಳೂರು-ಗುರುಪುರ-ಕೈಕಂಬ-ಮಳಲಿ-ಪೊಳಲಿ

10. ಶೇಡಿಗುರಿ-ಕೆಪಿಟಿ-ಮಂಗಳಾದೇವಿ

11. ಸ್ಟೇಟ್‌ಬ್ಯಾಂಕ್‌-ತೊಕ್ಕೊಟ್ಟು-ದೇರಳಕಟ್ಟೆ-ಪಾನೇಲ

12. ಕಂಕನಾಡಿ ರೈ.ನಿಲ್ದಾಣ-ಮಂಗಳೂರು-ಸುರತ್ಕಲ್‌-ಕಟೀಲು

13. ಮಂಗಳೂರು-ಸುರತ್ಕಲ್‌-ಕಟೀಲು

error: Content is protected !!