ಒಂಬತ್ತು ವರ್ಷಗಳ ಅಜ್ಞಾತವಾಸ’ ಅಂತ್ಯ: ಕೊನೆಗೂ ಖಾಕಿ ಬಲೆಗೆ ಬಿದ್ದ ಆಲ್ತಾಫ್!

ಪುತ್ತೂರು: ಆರೋಪಿಗಳು ಎಷ್ಟೇ ಜಾಣತನದಿಂದ ಅಡಗಿ ಕುಳಿತುಕೊಂಡರೂ ಅಂತಿಮವಾಗಿ ಆ ಖಾಕಿ ಪಡೆ ಅವರ ಕಾಲರ್ ಹಿಡಿಯೇ ಹಿಡಿಯುತ್ತದೆ ಎನ್ನುವುದಕ್ಕೆ ಪುತ್ತೂರಿನ ಅಬ್ಬಾಸ್ ಆಲಿ ಆಲ್ತಾಫ್(55) ಪ್ರಕರಣವೇ ಸಾಕ್ಷಿ. ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದು, ಆಮೇಲೆ ವಿಚಾರಣೆಗೆ ಬಾರದೇ ಒಂಬತ್ತು ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದ ಆಲ್ತಾಫ್ ಇದೀಗ ಮತ್ತೆ ಸಿಕ್ಕಿಬಿದ್ದಿದ್ದಾನೆ.

ಪುತ್ತೂರು ನಗರ ಠಾಣೆಯ ಹಳೆಯ ಕೇಸುಗಳು (ಅ.ಕ್ರ: 51/2012 ಮತ್ತು 52/2012) ಇವನ ಬೆನ್ನ ಹಿಂದೆ ಬಿದ್ದಿದ್ದವು. ಮಂಗಳೂರಿನ ಪದವು ಎಂಬಲ್ಲಿ ಈತ ಪೊಲೀಸರ ಕಣ್ತಪ್ಪಿಸಿ ಅಡಗಿ ಕುಳಿತ್ತಿದ್ದ. ಆದರೆ ಮಂಗಳೂರಿನ ಕುಲಶೇಖರ ಮತ್ತು ಬಿಕರ್ನಕಟ್ಟೆಯ ಅಲಿಗಲ್ಲಿಗಳಲ್ಲಿ ಹೊಂಚು ಹಾಕಿ ಕುಳಿತಿದ್ದ ಪೊಲೀಸರು, ಅಂತಿಮವಾಗಿ ಇವನನ್ನ ದಸ್ತಗಿರಿ ಮಾಡಿದ್ದಾರೆ.

ನ್ಯಾಯಾಲಯದ ಷರತ್ತುಗಳನ್ನು ಗಾಳಿಗೆ ತೂರಿ 9 ವರ್ಷ ತಲೆಮರೆಸಿಕೊಂಡಿದ್ದಕ್ಕೆ ಇವನ ಮೇಲೆ BNS 2023ರ ಕಲಂ 269ರ ಅಡಿಯಲ್ಲಿ ಮತ್ತೊಂದು ಹೊಸ ಪ್ರಕರಣ (ಅ.ಕ್ರ: 18/2026) ದಾಖಲಾಗಿದೆ. ಸದ್ಯಕ್ಕೆ ಈ ಆಲ್ತಾಫ್‌ಗೆ ನ್ಯಾಯಾಲಯ ಫೆಬ್ರವರಿ 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

error: Content is protected !!