ಸಸಿಹಿತ್ಲು : ಕಾರ್ಣಿಕ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ನಿರ್ಮಿಸಿದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಫೆಬ್ರವರಿ 4ರಿಂದ10 ರ ತನಕ ನಡೆಯಲಿರುವ ಹಿನ್ನೆಲೆಯಲ್ಲಿ ನೂತನ ಧ್ವಜಸ್ತಂಭ ಸ್ಥಾಪನೆ ಹಾಗೂ ಆಮಂತ್ರಣ ಬಿಡುಗಡೆ ಸಮಾರಂಭ ಗುರುವಾರ(ಡಿ.25) ಶ್ರೀ ಕ್ಷೇತ್ರದಲ್ಲಿ ನಡೆಯಿತು.

ರಂಗನಾಥ್ ಭಟ್ ಇವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 10.20 ರ ಕುಂಭ ಲಗ್ನ ಮುಹೂರ್ತದಲ್ಲಿ ಪೂಜಾ ವಿಧೀ ವಿಧಾನ ಹಾಗೂ ಧ್ವಜಸ್ತಂಭ ಸ್ಥಾಪನೆ ನಡೆಯಿತು. ಇದಾದ ಬಳಿಕ ಗಣ್ಯರ ಉಪಸ್ಥಿತಿಯಲ್ಲಿ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರರು ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ, ಮುಂಬೈ ಉದ್ಯಮಿ ಮನೋಜ್ ನಾಗ್‌ಪಾಲ್ ದಂಪತಿ, ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರು ಸತ್ಯಜಿತ್ ಸುರತ್ಕಲ್, ಗರೋಡಿ ಕ್ಷೇತ್ರದ ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ದಯಾನಂದ ಗುರಿಕಾರರು,ಕಾಂತು ಲಕಣ ಗಡಿ ಪ್ರದಾನ ಯಾನೆ ಪಠೇಲ ಮನೆತನದ ಪ್ರತಿನಿಧಿ ಲೀಲಾಧರ ಬಂಗೇರ, ನಿರಂಜನ ಬಂಗೇರ ನಡಿಕುದ್ರು, ಸುರೇಶ್ ಪೂಜಾರಿ, ದಾಮೋದರ ಪೂಜಾರಿ, ಪದ್ಮನಾಭ ಬಂಗೇರ, ಗೋಪಿನಾಥ ಪಡಂಗ, ಚಂದ್ರಶೇಖರ ನಾನಿಲ್, ಧ್ವಜಸ್ತಂಭ ದಾನಿಲಾಯಿನ ಅಮೃತಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ, ಕಾರ್ಯಾಧ್ಯಕ್ಷ ಪರಮಾನಂದ ಸಾಲ್ಯಾನ್, ಮತ್ತು ಸರ್ವ ಸದಸ್ಯರು, ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಕೋಟ್ಯಾನ್ ಮತ್ತು ಸರ್ವ ಸದಸ್ಯರು, ಮಹಿಳಾ ವಿಭಾಗದ ಅಧ್ಯಕ್ಷರು ಶಕುಂತಳ ಭೋಜ ಬಂಗೇರ, ಪುಷ್ಪಾ ದಯಾನಂದ ಮತ್ತು ಸರ್ವ ಸದಸ್ಯೆಯರು, ಮುಂಬೈ ಸಮಿತಿ ಸದಸ್ಯರು, ಕಡಪುರ ಮನೆತನದವರು, ಮಿತ್ರಪಟ್ಣ ಬಂಧುಗಳು, ಕದಿಕೆ ಮೊಗವೀರ ಸಭಾದ ಪ್ರತಿನಿಧಿಗಳು ಹಾಗೂ ಕ್ಷೇತ್ರದ ನಾಲ್ಕುಕರೆಯ ಸರ್ವ ಸಮಾಜದ ಭಕ್ತಾದಿಗಳು ಭಾಗವಹಿಸಿದ್ದರು.