ಮಾರ್ಕ್ ಸಿನಿಮಾ ರಾಜ್ಯದೆಲ್ಲೆಡೆ ಬಿಡುಗಡೆ; ಪ್ರಿಯಾ ಸುದೀಪ್, ಸಾನ್ವಿ ಅಭಿಮಾನಿಗಳ ಸಂಭ್ರಮ ಕಂಡು ಫುಲ್ ಖುಷ್!

ಬೆಂಗಳೂರು: ಮಾರ್ಕ್ ಚಿತ್ರದ ಮೊದಲ ದಿನದ ಸಂಭ್ರಮ ಜೋರಾಗಿದ್ದು, ಕಿಚ್ಚ ಸುದೀಪ್‌ ಅಭಿಮಾನಿಗಳು ಚಿತ್ರವನ್ನ ಅದ್ಧೂರಿಯಾಗಿಯೇ ಸ್ವಾಗತಿಸಿದ್ದಾರೆ. ಆದರೆ ಸುದೀಪ್ ಈ ಸಡಗರದ ಸಂಭ್ರಮದಲ್ಲಿ ಭಾಗಿ ಆಗಿಲ್ಲ, ಅವರು ಡಿಸೆಂಬರ್ 31ರಂದು ತಮ್ಮ ಚಿತ್ರವನ್ನ ನೋಡಲಿದ್ದಾರೆ.

ಸುದೀಪ್ ಅಭಿನಯದ ಮಾರ್ಕ್ ಚಿತ್ರ ರಾಜ್ಯದೆಲ್ಲೆಡೆ ರಿಲೀಸ್ ಆಗಿದ್ದು, ಬೆಳಗ್ಗೆ 6 ಗಂಟೆಗೆಯೇ ಶೋ ಶುರು ಆಗಿದೆ. ಪ್ರಿಯಾ ಸುದೀಪ್ ಹಾಗೂ ಸಾನ್ವಿ ಸುದೀಪ್ ಈ ಚಿತ್ರವನ್ನ ಅಭಿಮಾನಿಗಳ ಜೊತೆಗೆ ಕುಳಿತು ನೋಡುತ್ತಿದ್ದಾರೆ. ಅಭಿಮಾನಿಗಳ ಸಂಭ್ರಮ ಕಂಡು ಪ್ರಿಯಾ ಸುದೀಪ್ ತುಂಬಾನೆ ಖುಷಿಪಟ್ಟಿದ್ದಾರೆ. ಹಾಗೆಯೇ ಅಭಿಮಾನಿಗಳಿಗೆಲ್ಲ ಕೈಮುಗಿದು ಧನ್ಯವಾದ ಕೂಡ ಹೇಳಿದ್ದಾರೆ.

ಮಾರ್ಕ್ ಚಿತ್ರದಲ್ಲಿ ಸುದೀಪ್ ಪೊಲೀಸ್ ಆಫೀಸರ್ ಆಗಿಯೇ ನಟಿಸಿದ್ದಾರೆ. ಮಾರ್ಕ್ ಚಿತ್ರವನ್ನ ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಟಿಮಣಿಯರೂ ಇದ್ದಾರೆ. ಆದರೆ, ನಾಯಕಿ ಅಂತ ಸುದೀಪ್‌ ಅವರಿಗೆ ಈ ಚಿತ್ರದಲ್ಲಿ ಯಾರೂ ಇಲ್ಲ. ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡಲಿಲ್ಲ ಅಂತ ಸುದೀಪ್ ಇಲ್ಲೂ ನಾಯಕಿಯನ್ನ ಇಟ್ಟಿಲ್ಲ.

ಮಾರ್ಕ್ ಚಿತ್ರ ಇಂದು(ಡಿ.25) ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಿದ್ದು, ಎರಡು ವಾರದ ಬಳಿಕ ಈ ಚಿತ್ರ ಇತರ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ ಅಂತ ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ.

error: Content is protected !!