ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2025ರಲ್ಲಿ ಮಹತ್ವದ ಪರಿವರ್ತನೆಯ ಅವಧಿ ಕಂಡಿದ್ದು, ಹಲವಾರು ಪ್ರಸಿದ್ಧ ಆಟಗಾರರು ಆಟದಿಂದ ಸಂಪೂರ್ಣವಾಗಿ ಈ ಬಾರಿ ದೂರ ಸರಿದಿದ್ದಾರೆ.

ಕೆಲವು ದಿಗ್ಗಜರು ನಿವೃತ್ತರಾದರೆ, ಇನ್ನು ಕೆಲವರು ಆಧುನಿಕ ಕ್ರಿಕೆಟ್ ನ ಟಿ20 ಲೀಗ್ ಗಳ ಕಾರಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಕೆಲವರು ದೊಡ್ಡ ಕಪ್ ಗೆದ್ದ ಬಳಿಕ ಈ ನಿರ್ಧಾರ ಮಾಡಿದರೆ, ಇನ್ನು ಕೆಲವರು ಕಿರಿಯ ಪ್ರತಿಭೆಗಳಿಗೆ ದಾರಿ ಮಾಡಿಕೊಡಲು ಮತ್ತು ಅಂತಾರಾಷ್ಟ್ರೀಯ ಗಮನದಿಂದ ದೂರವಾಗಿ ತಮ್ಮ ಜೀವನದ ಮುಂದಿನ ಅಧ್ಯಾಯವನ್ನು ಪ್ರಾರಂಭಿಸಲು ಈ ಆಯ್ಕೆ ಮಾಡಿಕೊಂಡರು.
2025 ರಲ್ಲಿ ನಿವೃತ್ತಿ ಹೊಂದುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟಿಗರ ಪಟ್ಟಿ:
ವಿರಾಟ್ ಕೊಹ್ಲಿ (ಭಾರತ) – ಟೆಸ್ಟ್ ಕ್ರಿಕೆಟ್
ರೋಹಿತ್ ಶರ್ಮಾ (ಭಾರತ) – ಟೆಸ್ಟ್ ಕ್ರಿಕೆಟ್
ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ) – ಟೆಸ್ಟ್ ಕ್ರಿಕೆಟ್
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) – ಏಕದಿನ
ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) – ಏಕದಿನ
ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾ) – ಏಕದಿನ
ಮುಷ್ಫಿಕರ್ ರಹೀಮ್ (ಬಾಂಗ್ಲಾದೇಶ) – ಏಕದಿನ
ದಿಮ್ಮುತ್ ಕರುಣರತ್ನೆ (ಶ್ರೀಲಂಕಾ) – ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳು
ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್) – ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳು
ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್) – ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳು
ಪಿಯೂಷ್ ಚಾವ್ಲಾ (ಭಾರತ) – ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳು
ಚೇತೇಶ್ವರ ಪೂಜಾರ (ಭಾರತ) – ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳು
ವೃದ್ಧಿಮಾನ್ ಸಹಾ (ಭಾರತ) – ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳು
ಹೆನ್ರಿಕ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ) – ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳು
ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್) – ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳು
ತಮಿಮ್ ಇಕ್ಬಾಲ್ (ಬಾಂಗ್ಲಾದೇಶ) – ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳು