ಭುವನೇಶ್ವರ್: ಉತ್ತರ ಪ್ರದೇಶದಲ್ಲಿ ನಡೆದ 69ನೇ ರಾಷ್ಟ್ರೀಯ ಶಾಲಾ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು ಒಡಿಶಾಗೆ ಮರಳುತ್ತಿದ್ದ 18 ಯುವ ಕುಸ್ತಿ ಪಟುಗಳು ರೈಲಿನಲ್ಲಿ ಶೌಚಾಲಯದ ಬಳಿಯೇ ಕುಳಿತು ಪ್ರಯಾಣಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಒಡಿಶಾದ ಶಾಲಾ ಶಿಕ್ಷಣ ಮತ್ತು ಸಮೂಹ ಶಿಕ್ಷಣ ಇಲಾಖೆಯ ವತಿಯಿಂದ 10 ಹುಡುಗರು ಹಾಗೂ 8 ಹುಡುಗಿಯರ ತಂಡ ಈ ಸ್ಪರ್ಧೆಗೆ ತೆರಳಿತ್ತು. ಆದರೆ, ಕ್ರೀಡಾಪಟುಗಳಿಗೆ ಮುಂಗಡ ಕಾಯ್ದಿರಿಸಿದ (Reserved) ಟಿಕೆಟ್ ವ್ಯವಸ್ಥೆ ಮಾಡಲು ಇಲಾಖೆ ವಿಫಲವಾಗಿತ್ತು. ಪರಿಣಾಮವಾಗಿ, ಈ ಪ್ರತಿಭಾವಂತ ಕ್ರೀಡಾಪಟುಗಳು ಅನಿವಾರ್ಯವಾಗಿ ರೈಲಿನ ಜನರಲ್ ಬೋಗಿಯ ಶೌಚಾಲಯದ ಬಳಿಯೇ ನೆಲದ ಮೇಲೆ ಕುಳಿತು ನೂರಾರು ಕಿಲೋಮೀಟರ್ ಪ್ರಯಾಣಿಸಿದ್ದಾರೆ.
ಪತಾಕೆ ಹಾರಿಸಬೇಕಾದ ಕ್ರೀಡಾಪಟುಗಳಿಗೆ ರೈಲಿನಲ್ಲಿ ಅಮಾನವೀಯ ಅನುಭವವಾಗಿದೆ. ಈ ಕುರಿತು ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಕ್ರೀಡಾಪ್ರೇಮಿಗಳು ಕಿಡಿಕಾರಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಒಡಿಶಾದ ಶಿಕ್ಷಣ ಸಚಿವ ನಿತ್ಯಾನಂದ ಗೊಂಡ್, ಇದೊಂದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ದೇಶದ ಕೀರ್ತಿ