ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೈಪಡ್ಕದಲ್ಲಿ ಬಾವಿಗೆ ಬಿದ್ದ ಮಹಿಳೆಯನ್ನು ಆಟೋ ಚಾಲಕ ಗುರುಪ್ರಕಾಶ್ ಅವರು ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ರಕ್ಷಿಸಿದ ಘಟನೆ ಡಿ. 23ರಂದು ನಡೆದಿದೆ.

ಕೈಪಡ್ಕದ ಬಳಿ ಮಹಿಳೆಯೊಬ್ಬರು ಅಚಾನಕ್ ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಗುರುಪ್ರಕಾಶ್, ತಕ್ಷಣವೇ ಬಾವಿಗೆ ಹಾರಿ ಸ್ಥಳೀಯರ ಸಹಕಾರದಿಂದ ಮಹಿಳೆಯನ್ನು ಮೇಲಕ್ಕೆತ್ತಿದರು. ಬಳಿಕ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತು.
ಪ್ರಾಣಾಪಾಯದ ಸಂದರ್ಭದಲ್ಲೂ ಧೈರ್ಯ ತೋರಿದ ಆಟೋ ಚಾಲಕ ಗುರುಪ್ರಕಾಶ್ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.