ಸುರತ್ಕಲ್ : ಎಂ.ಆರ್.ಪಿ.ಎಲ್ ಮ್ಯಾನೇಜ್ಮೆಂಟ್ ಸ್ಟಾಫ್ ಅಸೋಸಿಯೇಷನ್ ಇದರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಸಂಪತ್ ರೈ , ಕಾರ್ಯದರ್ಶಿಯಾಗಿ ಜಿ. ದಯಾನಂದ ಪ್ರಭು, ಉಪಾಧ್ಯಕ್ಷರಾಗಿ ಸಂಪತ್ ಕುಮಾರ್ ಎಚ್. ಸಿ ಹಾಗೂ ಜೇಸಸ್ ವಲನ್ ಅರಸು, ಹಾಗೂ ಜೊತೆ ಕಾರ್ಯದರ್ಶಿಯಾಗಿ ಹರೀಶ ಬಿ, ಮತ್ತು ಅರುಣ್ ಮುರಳಿ ಪದ್ಮನ್ , ಖಜಾಂಚಿಯಾಗಿ ಪ್ರದೀಪ್ ಕುಮಾರ್ ಆಯ್ಕೆಯಾಗಿದ್ದಾರೆ.
ಎಂ.ಆರ್.ಪಿ.ಎಲ್ ನ ಮಾನವ ಸಂಪನ್ಮೂಲ ವಿಭಾಗದ ಮಹಾಪ್ರಬಂಧಕರಾಗಿರುವ ಸತೀಶ್ ಎಂ ಇವರು ಚುನಾವಣಾಧಿಕಾರಿಯಾಗಿ , ಹಾಗೂ ಕಾಶಿ ವಿಶ್ವನಾಥನ್, ಮತ್ತು ಅರುಣ್ ಎಸ್ ಇವರು ಉಪಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.