ಫಲ್ನಿರ್‌ನಲ್ಲಿ ‘ಅಸ್ತ್ರ ಗೋಲ್ಡ್ ಅಂಡ್ ಡೈಮಂಡ್ಸ್’ ಗ್ರ್ಯಾಂಡ್ ಓಪನಿಂಗ್

ಮಂಗಳೂರು: ನಗರದ ಫಲ್ನಿರ್ ಪ್ರದೇಶದಲ್ಲಿ ನೂತನವಾಗಿ ಸ್ಥಾಪಿತಗೊಂಡಿರುವ ಅಸ್ತ್ರ ಗೋಲ್ಡ್ & ಡೈಮಂಡ್ಸ್ ಶೋರೂಮ್‌ನ ಭವ್ಯ ಉದ್ಘಾಟನೆ ಡಿಸೆಂಬರ್ 23, 2025ರಂದು ಬೆಳಿಗ್ಗೆ 10.30ಕ್ಕೆ ನಡೆಯಿತು. ಅಸ್ತ್ರ ಗ್ರೂಪ್‌ನ ಸಿಇಒ ಲಂಚುಲಾಲ್ ಕೆ.ಎಸ್  ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು

ಗ್ರಾಹಕರಿಗೆ ಗುಣಮಟ್ಟದ ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ಒದಗಿಸುವ ಉದ್ದೇಶದಿಂದ ಅಸ್ತ್ರ ಗ್ರೂಪ್ ಈ ನೂತನ ಶೋರೂಮ್ ಆರಂಭಿಸಿದೆ.

ಆಧುನಿಕ ವಿನ್ಯಾಸ, ಆಕರ್ಷಕ ಆಭರಣ ಸಂಗ್ರಹ ಹಾಗೂ ಗ್ರಾಹಕ ಸ್ನೇಹಿ ಸೇವೆಗಳೊಂದಿಗೆ ಅಸ್ತ್ರ ಗೋಲ್ಡ್ & ಡೈಮಂಡ್ಸ್ ಮಂಗಳೂರಿನ ಆಭರಣ ವ್ಯಾಪಾರ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಿದೆ. ಪರಂಪರೆ ಮತ್ತು ನವೀನತೆಯ ಸಂಯೋಜನೆಯೊಂದಿಗೆ ರೂಪುಗೊಂಡಿರುವ ಈ ಶೋರೂಮ್‌ನಲ್ಲಿ ವೈವಿಧ್ಯಮಯ ಚಿನ್ನ ಮತ್ತು ವಜ್ರಾಭರಣಗಳ ವಿಶಿಷ್ಟ ಸಂಗ್ರಹವನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಅಸ್ತ್ರ ಗ್ರೂಪ್‌ನ ಸಿಇಒ ಲಂಚುಲಾಲ್ ಕೆ.ಎಸ್., ಪದ್ಮರಾಜ್ ಆರ್., ಚಿತ್ರನಟ ಅಸ್ತಿಕ್ ಅವಿನಾಶ್ ಶೆಟ್ಟಿ, ಜೆ.ಪಿ. ತೂಮಿನಾಡ್ ಸೇರಿದಂತೆ ಅನೇಕ ಗಣ್ಯರು, ವ್ಯಾಪಾರ ವಲಯದ ಪ್ರಮುಖರು ಹಾಗೂ ಆಹ್ವಾನಿತ ಅತಿಥಿಗಳು ಉಪಸ್ಥಿತರಿದ್ದರು.

error: Content is protected !!