ಜನವರಿ 15ರೊಳಗೆ ಡಿಕೆ ಶಿವಕುಮಾರ್ ಸಿಎಂ! ಸತೀಶ್‌ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ! ಬಾಗಲಕೋಟೆಯ ಜ್ಯೋತಿಷಿಯಿಂದ ಸ್ಫೋಟಕ ಭವಿಷ್ಯ

ಬಾಗಲಕೋಟೆ: ಕರ್ನಾಟಕ ರಾಜಕೀಯದಲ್ಲಿ ಈಗಾಗಲೇ ಸಿಎಂ ಕುರ್ಚಿ ಬದಲಾವಣೆ ಕುರಿತ ಗುಸುಗುಸು ಜೋರಾಗಿರುವ ಹೊತ್ತಿನಲ್ಲಿ, ಬಾಗಲಕೋಟೆಯಿಂದ ಬಂದಿರುವ ಒಂದು ಭವಿಷ್ಯ ರಾಜ್ಯ ರಾಜಕಾರಣಕ್ಕೆ ಮತ್ತಷ್ಟು ಬೆಂಕಿ ಹಚ್ಚಿದೆ. “ಜನವರಿ 15ರೊಳಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ” – ಎಂಬ ಈ ಮಾತು ಇದೀಗ ಕಾಂಗ್ರೆಸ್‌ ವಲಯದಲ್ಲಿ ಮಾತ್ರವಲ್ಲ, ಇಡೀ ರಾಜಕೀಯ ವಲಯದಲ್ಲೇ ಎದೆಬಡಿತ ಹೆಚ್ಚಿಸಿದೆ.

ಈ ಸ್ಫೋಟಕ ಭವಿಷ್ಯ ನುಡಿದವರು ಬಬಲೇಶ್ವರ ಜ್ಯೋತಿಷಿ ಮನೆತನದ ಹಾಗೂ ಬಾಗಲಕೋಟೆಯ ಖ್ಯಾತ ಜ್ಯೋತಿಷಿಯಾಗಿರುವ ಉಲ್ಲಾಸ್ ಜೋಶಿ. ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್‌ನೊಳಗಿನ ಅಸಮಾಧಾನ, ಸಿಎಂ ಕುರ್ಚಿಯ ಕುರಿತ ಲೆಕ್ಕಾಚಾರಗಳು ಮತ್ತು ಡಿಕೆ ಶಿವಕುಮಾರ್ ಅವರ ಚಟುವಟಿಕೆಗಳು ಹೆಚ್ಚುತ್ತಿರುವ ಸಮಯದಲ್ಲೇ ಈ ಭವಿಷ್ಯ ಹೊರಬಿದ್ದಿರುವುದು ವಿಶೇಷ ಗಮನ ಸೆಳೆಯುತ್ತಿದೆ.

“ರಾಘವೇಂದ್ರ ಸ್ವಾಮಿಗಳೇ ನನ್ನ ನಾಲಿಗೆಯಿಂದ ನುಡಿಸುತ್ತಾರೆ. ನಾನು ಜಪಮಣಿ ಪಠಿಸುತ್ತಾ ಸ್ವಾಮಿಗೆ ಪ್ರಶ್ನೆ ಹಾಕುತ್ತೇನೆ. ಅವರು ನೀಡುವ ಉತ್ತರವೇ ಭವಿಷ್ಯವಾಗಿ ಹೊರಬರುತ್ತದೆ” ಎಂದು ಜ್ಯೋತಿಷಿ ಉಲ್ಲಾಸ್ ಜೋಶಿ ಹೇಳಿದ್ದಾರೆ. ಇದುವರೆಗೆ ತಾವು ನುಡಿದ ಅನೇಕ ಭವಿಷ್ಯಗಳು ನಿಜವಾಗಿವೆ, ಯಾರೊಬ್ಬರೂ ಸುಳ್ಳೆಂದು ಹೇಳಿಕೊಂಡು ಬಂದಿಲ್ಲ ಎಂಬ ಆತ್ಮವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ, ಕಾಂಗ್ರೆಸ್‌ನೊಳಗಿನ ಮತ್ತೊಂದು ದೊಡ್ಡ ಬದಲಾವಣೆಯ ಸೂಚನೆಯನ್ನೂ ಜೋಶಿ ನೀಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ಭವಿಷ್ಯ ಕೂಡ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟುಹಾಕಿದೆ.

ಒಂದು ಕಡೆ ಕಾಂಗ್ರೆಸ್‌ನೊಳಗಿನ ಒಳಗುದ್ದಾಟ, ಮತ್ತೊಂದು ಕಡೆ ಡಿಕೆ ಶಿವಕುಮಾರ್ ಅವರ ಸಕ್ರಿಯ ರಾಜಕೀಯ ರಾಜಕಾರಣ, ಇವೆಲ್ಲದರ ನಡುವೆ ಬಾಗಲಕೋಟೆಯಿಂದ ಹೊರಬಿದ್ದ ಈ ಭವಿಷ್ಯ ನಿಜವಾಗುತ್ತದೆಯೇ? ಜನವರಿ 15ರೊಳಗೆ ರಾಜ್ಯ ರಾಜಕಾರಣದಲ್ಲಿ ಭೂಕಂಪ ಉಂಟಾಗುತ್ತದೆಯೇ? ಹೀಗಾಗಿ ಎಲ್ಲರ ಕಣ್ಣುಗಳು ಈಗ ಕ್ಯಾಲೆಂಡರ್‌ನ ದಿನಾಂಕಗಳತ್ತ ನೆಟ್ಟಿವೆ. ಭವಿಷ್ಯ ನಿಜವಾಗುತ್ತದೆಯೇ? ಅಥವಾ ಇದು ಮತ್ತೊಂದು ರಾಜಕೀಯ ಕುತೂಹಲವೇ? ಉತ್ತರ ಸಿಗಲು ದಿನಗಳಷ್ಟೇ ಬಾಕಿ ಉಳಿದಿದೆ.

ಇದೇ ತರ ಹಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಕೆಲವೊಂದು ಕಾಕತಾಳೀಯದಂತೆ ನಿಜವಾಗಿದೆ. ಇನ್ನು ಕೆಲವು ಸುಳ್ಳಾಗಿದೆ. ಇನ್ನು ಕೆಲವರು ನಾನು ಮೊದಲೇ ಹೇಳಿದ್ದೆ ಎಂದೆಲ್ಲಾ ತಿಪ್ಪೆ ಸಾರಿಸುವವರೂ ಇದ್ದಾರೆ.

error: Content is protected !!