ಮಂಗಳೂರು: ಪಿಲಿಪೈನ್ಸ್‌ನಲ್ಲಿ ಡಿ.2ರಿಂದ ಡಿ.10ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಗ್ರ್ಯಾಂಡ್ ವಿನ್ನರ್ ಪ್ರಶಸ್ತಿಯನ್ನು ಮಂಗಳೂರು ಮೂಲದ ವಿದ್ಯಾ ಸಂಪತ್ ಪಡೆದುಕೊಂಡಿದ್ದಾರೆ.

ಪಿಲಿಫೈನ್ಸ್‌ನ ನಡೆದ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಸ್ಪರ್ಧೆಯೂ ಒಂಬತ್ತು ದಿನಗಳ ಕಾಲ ನಡೆದಿದ್ದು, 22ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಾನಾ ದೇಶಗಳ ನಡುವೆ ಭಾರತವನ್ನು ಪ್ರತಿನಿಧಿಸಿದ ವಿದ್ಯಾ ಸಂಪತ್ ಗ್ರ್ಯಾಂಡ್ ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸ್ಪರ್ಧೆಯೂ ವಿವಿಧ ಹಂತಗಳಲ್ಲಿ ನಡೆದಿದ್ದು, ಟ್ಯಾಲೆಂಟ್ ರೌಂಡ್, ರಾಷ್ಟ್ರೀಯ ಕಾಸ್ಟ್ಯೂಮ್, ಕ್ಲೋಸ್ ರೂಂ ಇಂಟರ್‌ವ್ಯೂ ಸೇರಿದಂತೆ ಅನೇಕ ಹಂತಗಳಲ್ಲಿ ನಡೆದಿದ್ದು, ನ್ಯಾಷನಲ್ ಕಾಸ್ಟ್ಯೂಮ್‌ಗೆ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ನವಿಲು ಹಾಗೂ ತಾವರೆ ಹೂವಿನ ಸಂಕೇತ ಹೊಂದಿರುವ ವಸ್ತ್ತ ಮನ ಸೆಳೆದಿತ್ತು.

ಪತ್ರಿಕಾಗೋಷ್ಠಿಯಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕ ಪಾತ್‌ವೇ ಎಂಟರ್‌ಪ್ರೈಸಸ್ ಮಾಲಕ ದೀಪಕ್ ಗಂಗೂಲಿ, ಮರ್ಸಿ ವೀಣಾ ಡಿಸೋಜಾ ಉಪಸ್ಥಿತರಿದ್ದರು.