ಕರ್ನಾಟಕದಲ್ಲೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಚ್ಚರಿಯ ಅಭ್ಯರ್ಥಿ?- ದೆಹಲಿಗೆ ಹಾರಿದ ಬಿವೈವಿ

ಬೆಂಗಳೂರು: ಬಿ ಮೋದಿ ಹಾಗೂ ಅಮಿತ್‌ ಶಾ ಸೇರಿಕೊಂಡು ಅಚ್ಚರಿ ಎಂಬಂತೆ 45 ವರ್ಷದ ನಿತಿನ್‌ ನವೀನ್‌ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದೀಗ ಕರ್ನಾಟಕದಲ್ಲೂ ಅಚ್ಚರಿಯ ಅಭ್ಯರ್ಥಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಹೀಗಾಗಿ ಕರ್ನಾಟಕ ಬಿಜೆಪಿಯಲ್ಲೂ ಸಹ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಅಧಿವೇಶ ಬಿಟ್ಟು ದೆಹಲಿಗೆ ಹಾರಿದ್ದಾರೆ. ನೂತನ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅಧಿಕಾರ ಸ್ವೀಕಾರ ಹಿನ್ನೆಲೆಯಲ್ಲಿ ವಿಜಯೇಂದ್ರ ದೆಹಲಿಗೆ ತೆರಳಿರುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ವಿಜಯೇಂದ್ರ ಮೊದಲೇ ಮುಂದಿನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂದು ಹೇಳಲಾಗಿರುವ ನಿತಿನ್​ ನಬಿನ್ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.

error: Content is protected !!