ಮಂಗಳೂರು: ಗುರು ಫ್ರೆಂಡ್ಸ್ ಗುರುನಗರ ಮತ್ತು ಗುರು ಮಹಿಳಾ ಸಂಘ 9 ನೇ ವಿಭಾಗ ಮಧ್ಯ ಇಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು.

ನ್ಯಾಯವಾದಿಗಳು ಸದಾಶಿವ ಐತಾಳ್ ಕೃಷ್ಣಾಪುರ, ಉದ್ಯಮಿ ರಮಾನಾಥ ಶೆಟ್ಟಿ ಗುರುನಗರ,ಗಣೇಶ್ ಪೂಜಾರಿ ಕೊಡಿಪಾಡಿ,ರಾಜಾರಾಮ್ ಸಾಲ್ಯಾನ್ ಪಡುಪದವು,ಶ್ರೀಕಾಂತ್ ಭಟ್ ಕೊಡಿಪಾಡಿ,ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಮುಡಾಯಿಕೊಡಿ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಮನಪಾ ಮಾಜಿ ಸದಸ್ಯೆ ಲಕ್ಷ್ಮೀ ಶೇಖರ ದೇವಾಡಿಗ, ಗುರು ಪ್ರೇಂಡ್ಸ್ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್ ಕೋಟ್ಯಾನ್ ದುಬೈ,ಅಧ್ಯಕ್ಷ ಭವಾನಿಶಂಕರ್,ಗುರು ಮಹಿಳಾ ಸಂಘದ ಅಧ್ಯಕ್ಷೆ ಉಷಾ ಶಂಕರ್ ಮುಂತಾದವರು ಉಪಸ್ಥಿತರಿದ್ದರು.