ಸುಳ್ಯದ ಯುವಕ ಮೈಸೂರಿನಲ್ಲಿ ರಸ್ತೆ ಅಪಘಾತಕ್ಕೆ ಬಲಿ!

ಸುಳ್ಯ: ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸುಳ್ಯದ ಯುವಕನೊರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮೈಸೂರು ಬಳಿಯ ಮಳವಳ್ಳಿಯಲ್ಲಿ ಶುಕ್ರವಾರ(ಡಿ.12) ಮುಂಜಾನೆ ನಡೆದಿದೆ.


ಮೃತನನ್ನು ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದ ಕಲ್ತಾರ್ ನಿವಾಸಿ ದೀಕ್ಷಿತ್ (25) ಮೃತ ಯುವಕ.

ದೀಕ್ಷಿತ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಬೆಂಗಳೂರಿನಿಂದ ಕಂದಡ್ಕದ ಕಲ್ತಾರ್‌ನಲ್ಲಿರುವ ತನ್ನ ಊರಿಗೆ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮೈಸೂರಿಗೆ ಸಮೀಪದ ಮಳವಳ್ಳಿ ಬಳಿ ಅವರು ಸವಾರಿ ಮಾಡುತ್ತಿದ್ದಾಗ, ಅಪರಿಚಿತ ವಾಹನವೊಂದು ಅವರ ಬೈಕ್‌ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ.

ಸ್ಥಳೀಯರು ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ದೀಕ್ಷಿತ್ ಅವರು ಮೃತಪಟ್ಟಿದ್ದಾರೆ.

error: Content is protected !!