“ದೇರೆಬೈಲ್‌ ದೈವಸ್ಥಾನದ ಗೌರವಾಧ್ಯಕ್ಷರ ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ಪ್ರತ್ರಿಕ್ರಿಯೆ ಏನು?”

“ದೇರೆಬೈಲ್‌ ದೈವಸ್ಥಾನದ ಗೌರವಾಧ್ಯಕ್ಷರ ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ಪ್ರತ್ರಿಕ್ರಿಯೆ ಏನು?”
ʻಕೊಂಡಾಣ ಕ್ಷೇತ್ರದಿಂದ ಚಿನ್ನ ಕದ್ದಿದ್ದರೆ ಪೊಲೀಸ್‌ ಠಾಣೆಗೆ ದೂರು ನೀಡಲಿʼ
“ಬಾರೆಬೈಲ್‌ ದೈವಸ್ಥಾನ ಕಟ್ಟುಕಟ್ಟಳೆ ರಿಷಬ್‌ ಶೆಟ್ಟಿಗೆ ಮೊದಲೇ ಹೇಳಬೇಕಿತ್ತು!”
“ರವಿಪ್ರಸನ್ನ ಸಿ.ಕೆ. ಬಕೆಟ್‌ ಅಲ್ಲದಿದ್ದರೆ ಮತ್ತೇನು?”
ಮಂಗಳೂರು: ಕಾಂತಾರ ಚಾಪ್ಟರ್-1‌ ಯಶಸ್ಸಿನ ಹಿನ್ನೆಲೆ ಮಂಗಳೂರಿನ ಬಾರೆಬೈಲ್‌ ದೈವಸ್ಥಾನದಲ್ಲಿ ವಾರಾಹಿ ಪಂಜುರ್ಲಿಗೆ ಹರಕೆಯ ನೇಮ ಸಲ್ಲಿಸಿತ್ತು. ಎಣ್ಣೆಬೂಳ್ಯದ ಸಂದರ್ಭ ದೈವದ ನರ್ತಕ ಅತಿರೇಕದಿಂದ ವರ್ತಿಸಿರುವುದು ಸಾಂಪ್ರದಾಯ, ಕಟ್ಟುಕಟ್ಟಳೆಯ ವಿರುದ್ಧವಾಗಿದೆ ಎಂದು ದೈವ ವಿಮರ್ಷಕ ತಮ್ಮ ಮಾಧ್ಯಮಗಳ ಮುಂದೆ ಹೇಳಿದ್ದರು.

ದೈವ ನರ್ತನದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕೆಲವರು ನಿಂದನಾತ್ಮಕ ಕಮೆಂಟ್‌ ಹಾಕುತ್ತಿದ್ದು, ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಂಡು ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾರೆಬೈಲ್‌ ಕ್ಷೇತ್ರದ ವತಿಯಿಂದ ಕ್ಷೇತ್ರದಲ್ಲಿ ಸ್ಪಷ್ಟೀಕರಣ ನೀಡಲಾಗಿತ್ತು. ದೈವಸ್ಥಾನದ ಆಡಳಿತ ಮಂಡಳಿ ದೈವ ನರ್ತಕನ ಪರವಾಗಿ ನಿಂತಿದ್ದು, ಆರೋಪಗಳಿಗೆಲ್ಲಾ ಸ್ಪಷ್ಟವಾಗಿ ತಿರಿಗೇಟನ್ನೂ ನೀಡಿತ್ತು.

ಆದರೆ ಕ್ಷೇತ್ರದ ಗೌರವಾಧ್ಯಕ್ಷ ರವಿಪ್ರಸನ್ನ ಸಿ.ಕೆ. ಅವರು ತಮ್ಮಣ್ಣ ಶೆಟ್ಟಿ ವಿರುದ್ಧ ಕೆಲವೊಂದು ಆರೋಪಗಳನ್ನು ಮಾಡಿದ್ದರು. ಮುಂಬೈಯಲ್ಲಿ ಅವರು ದೈವ ನರ್ತನ ಮಾಡಿರುವುದು ಎಷ್ಟು ಸರಿ? ಕೊಂಡಾಣ ಷಣ್ಮುಗ ದೈವಸ್ಥಾನದ ಚಿನ್ನ ಕದ್ದ ಅವರಿಗೆ ಇಲ್ಲಿನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದೆಲ್ಲಾ ಸ್ಪಷ್ಟನೆ ನೀಡಿದ್ದರು.

ʻಬಾರಬೈಲ್ ವಾರಾಹಿ ಪಂಜುರ್ಲಿ ನೇಮದ ಕಟ್ಟುಕಟ್ಟಲೆಯಲ್ಲಿ ಲೋಪ ಆಗಿಲ್ಲ: ʻದೇವಸ್ಥಾನದ ಚಿನ್ನ ಕದ್ದವರು ದೈವಗಳ ಬಗ್ಗೆ ಮಾತಾಡೋದು ಸರಿಯಾ?ʼ

ರವಿಪ್ರಸನ್ನ ಸಿ.ಕೆ. ಅವರ ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ಅವರು ವಾಯ್ಸ್‌ ಆಫ್‌ ಪಬ್ಲಿಕ್‌ ಜೊತೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ್ದಾರೆ. ಇದರ ಸಂಪೂರ್ಣ ವಿಡಿಯೋ ಇದೀಗ ʻವಾಯ್ಸ್‌ ಆಫ್‌ ಪಬ್ಲಿಕ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಕಟಗೊಂಡಿದೆ. 

error: Content is protected !!