ನನಗೆ ಮಾಧ್ಯಮ, ಕೋರ್ಟ್‌, ಕಚೇರಿ ಸರಕಾರ ಎಲ್ಲವೋ ದೈವವೇ..: ಬಾರೆಬೈಲ್‌ ನೇಮ ವಿಚಾರವಾಗಿ ದೈವನರ್ತಕ ಪ್ರತಿಕ್ರಿಯೆ

ಮಂಗಳೂರು: ಬಾರೆಬೈಲು ವಾರಾಹಿ ಪಂಜುರ್ಲಿ ಕ್ಷೇತ್ರದಲ್ಲಿ ವಾರಾಹಿ ಪಂಜುರ್ಲಿಯ ಎಣ್ಣೆಬೂಳ್ಯದ ವಿಚಾರವಾಗಿ ನಡೆಯುತ್ತಿರುವ ನಡೆಯುತ್ತಿರುವ ಬೆಳವಣಿಗೆಯ ಕುರಿತು, ದೈವಕ್ಕೆ ಕಟ್ಟಿದ ಮುಖೇಶ್‌ ಗಂಧಕಾಡು ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ.

ನಾನು ಎರಡೇ ವಿಷಯ ಮಾತನಾಡೋಡು. ನನಗೆ ಮಾಧ್ಯಮ, ಕೋರ್ಟ್‌, ಕಚೇರಿ ಸರಕಾರ ಎಲ್ಲವೋ ದೈವವೇ.. ಬೇರೆ ಯಾವುದೇ ವಿಚಾರವಿಲ್ಲ. ನಾನಿರುವುದು ಬಾಡಿಗೆ ಮನೆಯಲ್ಲಿ ನನ್ನ ಮನೆ ಹೇಗುಂಟು ಅಂತ ಒಮ್ಮೆ ಬಂದು ನೋಡಿ. ನನ್ನ ಅಜ್ಜ ಪಿಜ್ಜ ಹಾಗೂ ನನ್ನ ಮಾವ ಅವರು ದೈವಗಳ ಏನು ಕೆಲಸ ಮಾಡಿಕೊಂಡು ಬಂದಿದ್ದರಾ ಅದನ್ನೇ ನಾನು ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

ಕಾಂತಾರಾ ಚಾಪ್ಟರ್‌ -1 ಚಿತ್ರದ ಯಶಸ್ಸಿನ ಹಿನ್ನೆಲೆ ಇತ್ತೀಚೆಗೆ ಬಾರೆಬೈಲ್‌ ವಾರಾಹಿ ಪಂಜುರ್ಲಿ ಕ್ಷೇತ್ರದಲ್ಲಿ ರಿಷಬ್‌ ಶೆಟ್ಟಿ ಹರಕೆಯ ನೇಮ ಸಲ್ಲಿಸಿದ್ದರು. ಈ ವೇಳೆ ದೈವ ನರ್ತಕ ಅತಿರೇಕದಿಂದ ವರ್ತಿಸಿದ್ದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಾರೆಬೈಲು ಕ್ಷೇತ್ರ ಸ್ಪಷ್ಟನೆ ನೀಡಿ ದೈವ ನರ್ತಕನ ಪರ ನಿಂತಿದೆ.

error: Content is protected !!