ಕಿನ್ನಿಗೋಳಿ: ಪಟ್ಟಣ ಪಂಚಾಯಿತಿ ಚುನಾವಣಾ ಸಿದ್ಧತೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ್ ಅವರು ಕಿನ್ನಿಗೋಳಿಯಲ್ಲಿ ಪಕ್ಷದ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿದರು.


ಚುನಾವಣಾ ರಣತಂತ್ರ, ಸಂಘಟನೆ ಬಲಪಡಿಸುವುದು ಹಾಗೂ ಬೂತ್ ಮಟ್ಟದ ವ್ಯವಸ್ಥೆಗಳ ಕುರಿತು ಸಂಸದರವರು ಅಭ್ಯರ್ಥಿಗಳೊಂದಿಗೆ ಚರ್ಚಿಸಿದರು. ಪಕ್ಷದ ಬಲವನ್ನು ವೃದ್ಧಿಸಲು ಸ್ಥಳೀಯ ನಾಯಕರ ಸಲಹೆ-ಸೂಚನೆಗಳನ್ನೂ ಅವರು ಆಲಿಸಿದರು.
ಈ ಸಭೆಯಲ್ಲಿ ಮೂಡುಬಿದ್ರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ ಮುಲ್ಕಿ, ಪಕ್ಷದ ಹಿರಿಯ ಭುವನಾಭಿರಾಮ ಉಡುಪ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು.
