ಮಂಗಳೂರಿಗೆ ಸಂಪರ್ಕ ಕಲ್ಪಿಸುವ 2 ಎಕ್ಸ್‌ಪ್ರೆಸ್‌ ರೈಲಿಗೆ ಮೋದಿ ಚಾಲನೆ

ತಿರುಚಿರಾಪಲ್ಲಿ: ಪ್ರಧಾನಿ ಮೋದಿ ಅವರು ಬುಧವಾರ(ಮಾ.11) ತಮಿಳುನಾಡಿನ ತಿರುಚಿರಾಪಲ್ಲಿಗೆ ಭೇಟಿ ನೀಡಿದ್ದು, ಈ ವೇಳೆ ಕರ್ನಾಟಕದ ರಾಮೇಶ್ವರಂ- ಮಂಗಳೂರು ಹಾಗೂ ತಿರುನಲ್ವೇಲಿ-ಮಂಗಳೂರು ಎಕ್ಸ್‌ಪ್ರೆಸ್‌ ರೈಲುಗಳು ಸೇರಿ 2 ಅಮೃತ ಭಾರತ್‌ ಹಾಗೂ ಒಂದು ಪ್ಯಾಸೆಂಜರ್‌ ರೈಲಿಗೆ ಹಸಿರು ನಿಶಾನೆ ತೋರಿದರು.

ಈ ವೇಳೆ 5,650 ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಅದರಲ್ಲಿ ನೀಲಗಿರಿ ಮತ್ತು ಈರೋಡ್‌ ಜಿಲ್ಲೆಗಳಲ್ಲಿ 3,680 ಕೋಟಿ ರೂ. ವೆಚ್ಚದ ಭಾರತ್‌ ಪೆಟ್ರೋಲಿಯಂ ಸಿಟಿ ಗ್ಯಾಸ್‌ ವಿತರಣಾ ಜಾಲಕ್ಕೆ ಶಂಕುಸ್ಥಾಪನೆ ನಡೆಸಿದ್ದು ಒಂದಾಗಿದೆ. ಈ ವೇಳೆ ಮಾತನಾಡಿದ ಮೋದಿ, ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರ ಸರಕಾರ ಸದಾ ಬದ್ಧವಾಗಿದೆ ಎಂದು ಹೇಳಿದರು.

error: Content is protected !!