ಮಂಗಳೂರು ಜೈಲು ಜಾಮರ್‌ ಸಮಸ್ಯೆ ಕೊನೆಗೂ ನಿವಾರಣೆ: ಟಿಸಿಐಲ್‌ ವರದಿ ಸಲ್ಲಿಕೆ

ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸ್ಥಾಪಿಸಲಾದ ಜಾಮರ್‌ ವ್ಯವಸ್ಥೆ ಉದ್ದೇಶಿತ ಮಿತಿಯನ್ನು ಮೀರಿ ಹೊರ ಪ್ರದೇಶಗಳಿಗೂ ಪರಿಣಾಮ ಬೀರುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (TCIL) ಮರುಮೌಲ್ಯಮಾಪನ ಮತ್ತು ಸುಧಾರಣೆ (Optimization) ಕಾರ್ಯಗಳನ್ನು ಪೂರ್ಣಗೊಳಿಸಿ ಕಾರಾಗೃಹ ಅಧಿಕಾರಿಗಳಿಗೆ ವರದಿ ಸಲ್ಲಿಸಿದೆ.

ಈ ಕುರಿತು ಡಿಸೆಂಬರ್ 6ರಂದು ಕಾರಾಗೃಹ ಅಧೀಕ್ಷಕರಿಗೆ ಕಳುಹಿಸಿದ ಪತ್ರದಲ್ಲಿ, ಅಕ್ಟೋಬರ್ 28 ಹಾಗೂ 29ರಂದು ನಡೆದ ಸಂಯುಕ್ತ ಮೇಲ್ವಿಚಾರಣೆಯಲ್ಲಿ WMO (Wireless Monitoring Organisation) ಜಾಮರ್‌ ಸಿಗ್ನಲ್ ಕಾರಾಗೃಹದ ಸರಹದ್ದನ್ನು ಮೀರಿದ ಘಟನೆಗಳನ್ನು ಪತ್ತೆಹಚ್ಚಿದ್ದರಿಂದ, ಸೆಟಿಂಗ್‌ ಬದಲಾವಣೆ ಅಗತ್ಯ ಎಂದು TCIL ತಿಳಿಸಿದೆ.

ಮರುಪರಿಶೀಲನೆಯ ಬಳಿಕ ಕೈಗೊಂಡ ಕ್ರಮಗಳು:
ಡಿಸೆಂಬರ್ 3ರಂದು TCIL ತಾಂತ್ರಿಕ ತಂಡ ಜೈಲಿಗೆ ಭೇಟಿ ನೀಡಿ, WMO ಶಿಫಾರಸು ಮಾಡಿದಂತೆ ಜಾಮರ್‌ ಪರಾಮಿತಿ(ಸೆಟಿಂಗ್)ಗಳನ್ನು ಪುನಃ ಹೊಂದಿಸಿದೆ. ಜಾಮರ್‌ ಸಿಗ್ನಲ್ ವ್ಯಾಪ್ತಿಯನ್ನು ಸಂಪೂರ್ಣವಾಗಿ ಕಾರಾಗೃಹ ಆವರಣದೊಳಗೆ ಮಾತ್ರ ಸೀಮಿತಗೊಳಿಸಲಾಗಿದೆ. ಕಾರಾಗೃಹದ ಹೊರಗಿನ ವಲಯಕ್ಕೆ ಯಾವುದೇ ವಿಕಿರಣ ಅಥವಾ ಸಿಗ್ನಲ್‌ ತಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

ಆಪ್ಟಿಮೈಸೇಶನ್ ನಂತರದ ಸ್ಥಿತಿ:
ಈ ಸುಧಾರಣೆ (Optimization)ಯ ನಂತರ ಮೊಬೈಲ್‌ ಸಿಗ್ನಲ್‌ ಜೈಲಿನೊಳಗಡೆ ಸಂಪೂರ್ಣವಾಗಿ ನಿಗ್ರಹಗೊಂಡಿದೆ. ಜೈಲಿನ ಹೊರ ಪ್ರದೇಶಗಳಲ್ಲಿ: ಏರ್ಟೆಲ್, VI, BSNL ಮತ್ತು ಜಿಯೋ ನೆಟ್ವರ್ಕ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ; ಕರೆ ಸಂಪರ್ಕ, ಡೇಟಾ ವೇಗದಲ್ಲಿ ಯಾವುದೇ ಅಡ್ಡಿ ಆಗಿಲ್ಲ. ಇದೀಗ ಹತ್ತಿರದ ಸಾರ್ವಜನಿಕ ಪ್ರದೇಶಗಳು—ಜಿಲ್ಲಾ ನ್ಯಾಯಾಲಯ, ಕನರಾ ಕಾಲೇಜು, ಶಾಲೆ ಮತ್ತಿತರ ಪ್ರದೇಶಗಳಲ್ಲಿ ಜಾಮರ್‌ನಿಂದ ಯಾವುದೇ ಅಡ್ಡಿಯಾಗುತ್ತಿಲ್ಲ. ಜಾಮರ್‌ ಪರಾಮಿತಿಗಳನ್ನು ಸಂಪೂರ್ಣವಾಗಿ WMO ಮಾನದಂಡಗಳಿಗೆ ಅನುಗುಣವಾಗಿ ಮರುಹೊಂದಿಸಲಾಗಿದೆ. ರೇಡಿಯೇಷನ್(ವಿಕರಣ) ಜೈಲು ಮಿತಿಯೊಳಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ದೂರಸಂಪರ್ಕ ಸೇವೆಗಳ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಿಲ್ಲ.

ಈ ವೇಳೆ ಜೈಲು ಭದ್ರತೆ ಹಾಗೂ ಸಿಗ್ನಲ್‌ ನಿಗ್ರಹ ಮಾನದಂಡಗಳು ಸಂಪೂರ್ಣವಾಗಿ ಪಾಲನೆಯಾಗುವಂತೆ ಮಾಡಲಾಗಿದೆ ಅಗತ್ಯವಿದ್ದರೆ ಮತ್ತೆ ಪರಿಶೀಲನೆ ನಡೆಸಲು ಸಹಕರಿಸಲು ಸಿದ್ಧವಿರುವುದಾಗಿ TCIL, ತಿಳಿಸಿದೆ.

error: Content is protected !!