ನವದೆಹಲಿ : ‘ಕಾರ್ತಿಗೈ ದೀಪಂ(ಕಾರ್ತಿಕ ದೀಪ)’ ವಿಚಾರದಲ್ಲಿ ತಮಿಳುನಾಡು ಸರ್ಕಾರ – ಹೈಕೋರ್ಟ್ ಆದೇಶ ಪಾಲಿಸದೆ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ತ್ವರಿತ ವಿಚಾರಣೆಯ ಬೇಡಿಕೆ ಇಟ್ಟಿದೆ.
![]()
ತಿರುಪರಂಕುಂದ್ರಂ ಬೆಟ್ಟದ ಮೇಲಿನ ‘ಕಾರ್ತಿಗೈ ದೀಪಂ’ ಬೆಳಗಿಸುವ ಹಕ್ಕು ಸಂಬಂಧಿಸಿದ ವಿವಾದದಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶಗಳನ್ನು ಪಾಲಿಸಿಲ್ಲವೆಂಬ ಆರೋಪ ತಮಿಳುನಾಡಿನ ಡಿಎಂಕೆ ಸರ್ಕಾರ ಎದುರಿಸುತ್ತಿದೆ. ಈ ಪ್ರಕರಣದ ಮೇಲ್ಮನವಿಯನ್ನು ತ್ವರಿತವಾಗಿ ವಿಚಾರಣೆ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತು. ಆದರೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಕ್ಷಣದ ವಿಚಾರಣೆಗೆ ಯಾವುದೇ ಭರವಸೆ ನೀಡಲಿಲ್ಲ.
ಏನು ವಿಚಾರ?
ಮದ್ರಾಸ್ ಹೈಕೋರ್ಟ್, ತಿರುಪರಂಕುಂದ್ರಂ ಬೆಟ್ಟದ ಮೇಲಿನ ಕಲ್ಲಿನ ದೀಪಕಂಬದಲ್ಲಿ ‘ಕಾರ್ತಿಗೈ ದೀಪಂ’ ಬೆಳಗಲು ಅನುಮತಿ ನೀಡಿತ್ತು. ಆದರೆ ತಮಿಳುನಾಡು ಸರ್ಕಾರ ಅದನ್ನು ಪಾಲಿಸದೇ, ದೇವಾಲಯದ ಒಳಗೇ ದೀಪ ಬೆಳಗುವಂತೆ ಮಾಡಿದಿತ್ತು. ಇದರಿಂದ ಹೈಕೋರ್ಟ್, ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿತ್ತು.
ಸರ್ಕಾರದ ವಾದ
ದೇವಾಲಯ ಮತ್ತು ದೀಪಕಂಬ ಪ್ರದೇಶ (Deepathoon) ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆ 1959ರ ಪ್ರಕಾರ ಸರ್ಕಾರದ ವಿಶೇಷ ನಿಯಂತ್ರಣದಲ್ಲಿದೆ. ಹಾಗಾಗಿ ಭಕ್ತರ ಸುರಕ್ಷತೆ ಮತ್ತು ಕಾನೂನು–ಸುವ್ಯವಹಾರದ ಕಾರಣಕ್ಕಾಗಿ ನಾವು ನಿಷೇಧಾಜ್ಞೆ (Section 144) ಹಾಕಿದ್ದೇವೆ ಎಂದು ಹೇಳಿದೆ.
ಹೈಕೋರ್ಟ್ ಸ್ಪಷ್ಟ ಆದೇಹೈಕೋರ್ಟ್‌ಗೆ ಏಕೆ ಕೋಪ?ಶ ನೀಡಿದ್ದರೂ, ಸರ್ಕಾರ ಅದೇ ಸಮಯದಲ್ಲಿ ನಿಷೇಧಾಜ್ಞೆ ಹಾಕಿ ಆದೇಶ ಪಾಲನೆಯನ್ನು ತಡೆಯಿತು. ಅಲ್ಲದೆ ವಿಭಾಗೀಯ ಪೀಠವು ಕೂಡ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿ, “ನ್ಯಾಯಾಲಯದ ಆದೇಶವನ್ನು ಕಾರ್ಯನಿರ್ವಾಹಕ (ಸರ್ಕಾರ) ತಡೆಯಲು ಸಾಧ್ಯವಿಲ್ಲ” ಎಂದು ತಿಳಿಸಿತು. ಈಗ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ತಮಿಳುನಾಡು “ತುರ್ತು ವಿಚಾರಣೆ” ಕೇಳಿದರೂ, ಸಿಜೆಐ “ಸಾಧ್ಯವಾದಷ್ಟು ಬೇಗ ನೋಡುತ್ತೇವೆ” ಎಂದಷ್ಟೇ ಹೇಳಿದ್ದಾರೆ.
