ಧರ್ಮಸ್ಥಳ ಬುರುಡೆ ಪ್ರಕರಣ: ಸ್ಫೋಟಕ ಮಾಹಿತಿ ನೀಡಿದ ಎಸ್‌ಐಟಿ ಮುಖ್ಯಸ್ಥ

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟಿರುವ ಪ್ರಕರಣದ ತನಿಖೆ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲೇ ಚಾರ್ಜ್​ ಶೀಟ್​ ಕೂಡ ಸಲ್ಲಿಕೆಯಾಗುತ್ತದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಎಸ್​ಐಟಿ (SIT) ಮುಖ್ಯಸ್ಥ ಪ್ರಣಬ್ ಮೊಹಂತಿ ತನಿಖೆ ಇನ್ನು ಮುಗಿದಿಲ್ಲ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಕೊಟ್ಟಿದ್ದಾರೆ.

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಸಲೆಂದು ಎಸ್​ಐಟಿ ರಚಿಸಿದ ಸರ್ಕಾರ ಮುಖ್ಯಸ್ಥರಾಗಿ ಪ್ರಣಬ್ ಮೊಹಂತಿ ಅವರನ್ನ ನೇಮಕ ಮಾಡಿತು. ತಕ್ಷಣ ಕಾರ್ಯ ಪ್ರವೃತ್ತರಾದ ಮೊಹಂತಿ ತಂಡ ಬೆಳ್ತಂಗಡಿಯಲ್ಲಿ ಕಚೇರಿಗೆ ಆಗಮಿಸಿ ತನಿಖೆ ಶುರು ಮಾಡಿತು. ದಟ್ಟ ಕಾಡುಗಳಲ್ಲಿ ಶವಗಳಿಗಾಗಿ ಶೋಧ ನಡೆಸಿತು. ಬಳಿಕ ದೂರು ಕೊಟ್ಟ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಕೇಸ್ ಸಂಬಂಧ ಹಲವರನ್ನು ವಿಚಾರಣೆ ನಡೆಸಿದ ಎಸ್​ಐಟಿ ಮುಖ್ಯಸ್ಥರು, ಹಲವರಿಗೆ ನೋಟೋಸನ್ನೂ ನೀಡಿದ್ದರು. ಪ್ರಕರಣದ ತನಿಖೆ ಮಂದಗತಿಯಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತಿದೆ.

ಈ ನಡುವೆ ಪ್ರಣಬ್ ಮೊಹಂತಿ ಇನ್ನು ಕೂಡ ತನಿಖೆ ಮುಕ್ತಾಯಗೊಂಡಿಲ್ಲ ಎಂದು ಹೇಳುವ ಮೂಲಕ ಸ್ಫೋಟಕ ತಿರುವು ನೀಡಿದ್ದಾರೆ.

ಚಾರ್ಜ್ ಶೀಟ್ ಸಿದ್ಧಗೊಂಡಿದೆ ಅಂತ ಯಾರು ಹೇಳಿದ್ದು, ಪ್ರಕರಣ ಇನ್ನೂ ಇನ್ನೂ ತನಿಖೆ ಹಂತದಲ್ಲಿದೆ. ತನಿಖೆ ಪೂರ್ಣಗೊಂಡಿಲ್ಲ‌. ಅರೆಸ್ಟ್ ಮಾಡುವುದೇ ತನಿಖೆಯಲ್ಲ ಎಂದು ಪ್ರಣಬ್ ಮೊಹಂತಿ ಹೇಳಿದ್ದಾರೆ. ರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಸದ್ದಿಲ್ಲದೆ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಸಲಿ ಸತ್ಯ ಏನು ಎನ್ನುವುದು ಬಯಲಿಗೆ ಬರುವ ಸಾಧ್ಯತೆ ಇದೆ.

error: Content is protected !!