ಟಾಲಿವುಡ್ & ಬಾಲಿವುಡ್ ಫ್ಯಾನ್ಸ್‌ಗೆ ಈ ವಾರ ಸಂಪೂರ್ಣವಾಗಿ ಸಮಂತಾ–ರಾಜ್ ನಿಧಿಮೋರು ಜೋಡಿ ಹಾಟ್ ಟಾಪಿಕ್ ಆಗಿದ್ದಾರೆ. ಡಿಸೆಂಬರ್ 1ರಂದು ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಯಾರ ಹಂಗೂ ಇಲ್ಲದೆ ನಡೆದ ಈ ಮದುವೆ ಅಭಿಮಾನಿಗಳಿಗೆ “ಸಡನ್ ಪ್ಲಾಟ್ ಟ್ವಿಸ್ಟ್” ಅನ್ನಿಸಿತು. ಕೇವಲ ಇವತ್ತು ಮಾತ್ರವಲ್ಲ, ಮದುವೆಯ ಪ್ರತಿಯೊಂದು ಫೋಟೋ, ಪ್ರತಿಯೊಂದು ಡೀಟೇಲ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಆದರೆ… ಕಥೆ ಇಲ್ಲಿ ಮುಗಿದಿಲ್ಲ…
ಸಮಂತಾ–ರಾಜ್ ಮದುವೆಯ ಫೋಟೋಗಳು ವೈರಲ್ ಆಗುತ್ತಿರುವಷ್ಟರಲ್ಲಿ, ನೆಟಿಜನ್‌ಗಳು ಹಿಂದಿನ ಒಂದು ವೀಡಿಯೋ ಹೊರ ತೆಗೆಯುತ್ತಿದ್ದಾರೆ. ಅದು ಸಮಂತಾ ಅವರ ಬಹಳ ಹಳೆಯ ಸಂದರ್ಶನದ ಕ್ಲಿಪ್.
ಅಲ್ಲಿ ನಿರೂಪಕಿಯೊಬ್ಬರು ಕೇಳುತ್ತಾರೆ, “ಆಹಾರವಿಲ್ಲದೇ ಬದುಕುವಿರಾ? ಅಥವಾ… ದೈಹಿಕ ಸಮೀಪತೆಯಿಲ್ಲದೇ ಬದುಕುವಿರಾ?”
ಅದಕ್ಕೆ ಸಮಂತಾ ಸ್ಮೈಲ್ ಮಾಡಿ, ಜೋಕ್–ಕಾನ್‌ಫಿಡೆನ್ಸ್ ಮಿಶ್ರವಾಗಿ, “ನಾನು ಆಹಾರವಿಲ್ಲದೇ ಕೂಡ ಬದುಕಬಲ್ಲೆ… ಆದರೆ ದೈಹಿಕ ಸಂಪರ್ಕವಿಲ್ಲದೆ ಒಂದು ದಿನವೂ ಬದುಕಲು ಸಾಧ್ಯವಿಲ್ಲ.” ಎಂದು ಹೇಳಿದ್ದರು.
ಈ ಕಾಮೆಂಟ್ ಮದುವೆ ಸುದ್ದಿಯ ನಡುವೆ ಮತ್ತೆ ಲೈಮ್‌ಲೈಟ್‌ಗೆ ಬಂದು, ಥಿಯೇಟರ್ ಮೊದಲ ದಿನ ಮೊದಲ ಶೋ ಲೆವೆಲ್‌ನಲ್ಲಿ ಚರ್ಚೆಯಾಗುತ್ತಿದೆ.

ಕೆಂಪು ರೇಷ್ಮೆ ಸೀರೆಯಲ್ಲಿ ಗ್ಲಾಮರಸ್ ಮಿಂಚು ಹರಿಸಿದ ಸಮಂತ
ಮದುವೆ ಸಂದರ್ಭ ಸಮಂತಾ ಧರಿಸಿದ್ದ ಕೆಂಪು ರೇಷ್ಮೆ ಸೀರೆ ಸೋಶಿಯಲ್ ಮೀಡಿಯಾದಲ್ಲಿ ರೆಡ್ ಕಾರ್ಪೆಟ್ ವಾಕ್ ತರಹವೇ ವೈರಲ್ ಆಗಿದೆ. ಸ್ಯಾಮ್ ಅವರ ಕೈಯಲ್ಲಿ ಹೊಳೆಯುತ್ತಿದ್ದ ಡೈಮಂಡ್ ರಿಂಗ್ — ಜೋಡಿ ಮದುವೆ ಮೂಮೆಂಟನ್ನು ಇನ್ನೂ ಹೈಲೈಟ್ ಮಾಡಿತು. ಕೇವಲ 30 ಅತಿಥಿಗಳ ಜೊತೆ ನಡೆದ ಗೌಪ್ಯ ಮದುವೆ ಇದಾಗಿತ್ತು

ಡಬಲ್ ಸೆಕೆಂಡ್ ಚಾಪ್ಟರ್
ವಿಶೇಷವೆಂದರೆ ಇದು ಇಬ್ಬರಿಗೂ ಎರಡನೇ ಮದುವೆ. ಸಿನಿಮಾ ಕಥೆಯಂತೆಯೇ ಇಬ್ಬರೂ ತಮ್ಮ ಹಿಂದಿನ ಸಂಬಂಧವನ್ನು ಮರೆತು ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ಯಾಕೆಂದರೆ ಸಮಂತಾ — ನಾಗಚೈತನ್ಯ ಜೊತೆಗಿನ ಮದುವೆ 2021ರಲ್ಲಿ ಅಂತ್ಯವಾಗಿತ್ತು. ರಾಜ್ ನಿಧಿಮೋರು 2015ರ ಮದುವೆಯಾಗಿದ್ದು, 2022ರಲ್ಲಿ ವಿಚ್ಛೇದನ ಪಡೆದಿದ್ದರು.