ಮಂಗಳೂರು: ‘ಕಾಂತಾರ-1’ ಸಿನಿಮಾ ಯಶಸ್ಸಿನ ಸಂಭ್ರಮವು ಚಲನಚಿತ್ರರಂಗದಾಚೆಗೂ ದೈವ ನಂಬಿಕೆಯ ಮೈದಾನಕ್ಕೆ ವಿಸ್ತರಿಸಿದ್ದಂತಹ ದೃಶ್ಯ ಗುರುವಾರ ರಾತ್ರಿ ಮಂಗಳೂರಿನಲ್ಲಿ ಕಂಡುಬಂತು. ನಟ–ನಿರ್ದೇಶಕ ರಿಷಬ್ ಶೆಟ್ಟಿ, ತಮ್ಮ ಕುಟುಂಬ ಸಮೇತರಾಗಿ ಬಾರೆಬೈಲ್ ದೈವಸ್ಥಾನದಲ್ಲಿ ಹರಕೆಯ ಕೋಲ ಸಮರ್ಪಿಸಿದರು.

ವರಾಹ ಪಂಜುರ್ಲಿ, ಜಾರಂದಾಯ ಹಾಗೂ ಬಂಟ ದೈವಗಳಿಗೆ ನಡೆದ ಈ ನೇಮದಲ್ಲಿ ರಿಷಬ್ ಶೆಟ್ಟಿ ತಮ್ಮ ಮನದಾಳದ ಕೃತಜ್ಞತೆಯನ್ನು ದೈವಕ್ಕೆ ಅರ್ಪಿಸಿದರು. ‘ಕಾಂತಾರ’ ಸಿನಿಮಾದಲ್ಲಿ ದೈವ-ನಂಬಿಕೆ ಮಹತ್ವದ ಅಂಶವಾಗಿದ್ದುದರಿಂದ, ಚಿತ್ರದ ಯಶಸ್ಸಿನ ನಂತರ ಈ ಹರಕೆ ನೆರವೇರಿಸುವುದು ವಿಶಿಷ್ಟ ಅರ್ಥವನ್ನೂ ಪಡೆಯಿತು.
ಕಾಂತಾರ -2ಕ್ಕೆ ಭಾರೀ ವಿಘ್ನ: ಬಾರೆಬೈಲ್ ವಾರಾಹಿ ಪಂಜುರ್ಲಿ ರಿಷಬ್ ಶೆಟ್ಟಿಗೆ ನೀಡಿದ ಭಯಾನಕ ಎಚ್ಚರಿಕೆ ಏನು?
ಈ ಸೇವೆಯನ್ನು ಹೊಂಬಾಳೆ ಫಿಲಂಸ್ ವತಿಯಿಂದ ಸಲ್ಲಿಸಲಾಗಿದ್ದು, ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದರಾಮ್ ಸೇರಿದಂತೆ ಚಿತ್ರರಂಗದ ಹಲವರು ಉಪಸ್ಥಿತರಿದ್ದರು.
ಬಾರೆಬೈಲು ಪಂಜುರ್ಲಿಯ ಎಚ್ಚರಿಕೆಯ ಬೆನ್ನಲ್ಲೇ ಕಾಂತಾರಕ್ಕೆ ಕಂಟಕದ ಸರಮಾಲೆ
ಕಳೆದ ಏಪ್ರಿಲ್‌ನಲ್ಲಿ ಇದೇ ದೈವಸ್ಥಾನದ ನೇಮದಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿಗೆ, ದೈವ “ಜಾಗರೂಕತೆಯಿಂದಿರಿ, ನನ್ನ ಬೆಂಗಾವಲು ನಿಮಗಿದೆ” ಎಂಬ ಅಭಯ ವಾಕ್ಯ ದೊರೆತಿತ್ತು. ಆ ಆಶೀರ್ವಾದದ ನೆನಪಿನಲ್ಲಿ, ತಮ್ಮ ಹರಕೆಯನ್ನು ನೆರವೇರಿಸಿ ಮತ್ತೊಮ್ಮೆ ದೈವಕ್ಕೆ ನಮಿಸಿದರು.
