ಡಿ.19-21: ಸುರತ್ಕಲ್ ಬಂಟರ ಭವನದಲ್ಲಿ “ಪರ್ವ 2025” ಸೀರೆ, ಲೈಫ್ ಸ್ಟೈ ಲ್, ಮತ್ತು ಫುಢ್ ಫೆಸ್ಟಿವೆಲ್

ಸುರತ್ಕಲ್: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಢ್ ಫೆಸ್ಟಿವೆಲ್ ನಡೆಯಲಿದೆ.

ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ ಚಂದ್ರಕಲಾ ಸದಾನಂದ ರೈ ಸಾರಥ್ಯದ ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ ರಾಮಚಂದ್ರ ಶೆಟ್ಟಿ ತಡಂಬೈಲ್ ರವರ ಕಥೆ, ಸುಕೇಶ್ ಶೆಟ್ಟಿ ಖಂಡಿಗೆ ನಿರ್ದೇಶನದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ”, ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನಗೊಳ್ಳಲಿದೆ. ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರ ತನಕ ಬಗೆಬಗೆಯ ತಿಂಡಿತಿನಿಸುಗಳ ಫುಡ್ ಫೆಸ್ಟಿವಲ್ ನಡೆಯಲಿದೆ.

ಮೂರು ದಿನಗಳ ಕಾಲ ಸುರತ್ಕಲ್ ಬಂಟರ ಭವನದಲ್ಲಿ ವಿವಿಧ ಮಳಿಗೆಗಳ ಸೀರೆ ಮಾರಾಟ ಮೇಳವೂ ನಡೆಯಲಿದೆ. ನವನವೀನ ಮಾದರಿಯ ಕಾಂಚಿಪುರಂ, ಬನಾರಸ್, ರೇಷ್ಮೆ, ಬಂಗಾಲಿ ಕಾಟನ್ ಹಾಗೂ ವಿವಿಧ ಮಾದರಿಯ ಸೀರೆಗಳು ಸಲ್ವಾರ್ ಸೂಟ್, ಕುರ್ತಾಗಳು, ಖಾದಿ ಭಂಡಾರ, ಕಸೂತಿ, ಹಸ್ತಕಲೆ ಬ್ಯಾಗುಗಳು, ಒಂದು ಗ್ರಾಂ ಚಿನ್ನಾಭರಣ ವಿವಿಧ ವಿನ್ಯಾಸದ ಆರ್ಟಿಫಿಶಲ್ ಜ್ಯುವೆಲ್ಲರಿ ಮಸಾಲೆ ಹುಡಿಗಳು, ಹರ್ಬಲ್ ಉತ್ಪನ್ನಗಳು ಹಾಗೂ ಅನೇಕ ವಿಧವಿಧ ಉತ್ಪನ್ನಗಳ ಅಪೂರ್ವ ಸಂಗ್ರಹವೂ ಇದೆ.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಉತ್ಪನ್ನಗಳು ದೊರೆಯಲಿದೆ. ಇದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆಯುವಂತಹ ಕಾರ್ಯಕ್ರಮವಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

error: Content is protected !!