ಮೋದಿ ನೇತೃತ್ವದಲ್ಲಿ ಭಗವದ್ಗೀತೆಯ ಪುರುಷೋತ್ತಮ ಯೋಗದ ಪಠಣೆ! ಇದರ ಗೂಢಾರ್ಥವೇನು?

ಉಡುಪಿ: ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ರೋಡ್‌ ಶೋ ನಡೆಸಿದ ಬಳಿಕ ಕನಕನ ಕಿಂಡಿಯ ಮೂಲಕ ಮೋದಿ ಜಗದ್ದೋದ್ಧಾರ ವಾಸುದೇವನ ದರ್ಶನ ಪಡೆದು, ಉದ್ಘಾಟಿಸಿದರು.

 

ಉಡುಪಿ ಶ್ರೀ ಮಧ್ವಾಚಾರ್ಯಮೂಲ ಮಹಾ ಸಂಸ್ಥಾನಂ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮೋದಿಯವರನ್ನು ಸ್ವಾಗತಿಸಿ, ನವಿಲು ಗರಿಯ ಪೇಠ ತೊರಿಸಿ, ರಕ್ಷೆ ತೊಡಿಸಿ ಸನ್ಮಾನಿಸಿದರು.

ತರ ಪರ್ಯಾಯ ಶ್ರೀಪಾದರ ಸಮ್ಮುಖದಲ್ಲಿ ಶ್ರೀಕೃಷ್ಣನ ಎದುರು ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ ಮಾಡಿದರು. ನಂತರ ಚಂದ್ರಶಾಲೆಗೆ ತೆರಳಿ ಅಷ್ಟ ಮಠದ ಯತಿಗಳ ಜತೆ ಚರ್ಚೆ ನಡೆಸಿದರು. ಬಳಿಕ ಮುಖ್ಯಪ್ರಾಣರ ದರ್ಶನ ನಡೆಯಿತು. ಗೀತಾ ಮಂದಿರದಲ್ಲಿ ಪರ್ಯಾಯ ಶ್ರೀಗಳ ಜತೆ ಮಾತುಕತೆ ನಡೆಸಿ ಅನಂತಶಯನ ಮೂರ್ತಿಯ ಉದ್ಘಾಟನೆ ನಡೆಸಿದರು.

ವಿಶೇಷವೆಂದರೆ ಯತಿವರ್ಯರ ಜೊತೆ ಮೋದಿ ಜೊತೆ ಸೇರಿದ್ದ ಸಹಸ್ರಾರು ಮಂದಿ ಭಗವದ್ಗೀತೆಯ 15ನೇ ಅಧ್ಯಾಯದ ಪುರುಷೋತ್ತಮ ಯೋಗದ ಪಠಣೆ ಮಾಡಲಾಯಿತು.

ಪುರುಷೋತ್ತಮ ಯೋಗದ ಗೂಢಾರ್ಥ:
15ನೇ ಅಧ್ಯಾಯದಲ್ಲಿ ಶ್ರೀಕೃಷ್ಣನು ಜಗತ್ತಿನ ಸ್ವರೂಪ, ಆತ್ಮ ಮತ್ತು ಪರಮಾತ್ಮನ ಬಗ್ಗೆ ವಿವರಿಸುತ್ತಾನೆ. ಕೃಷ್ಣನು ಪ್ರಪಂಚವನ್ನು ಮೂಲ ಮೇಲಿರುವ, ಕೊಂಬೆಗಳು ಕೆಳಕ್ಕೆ ಹರಡಿರುವ ಅಶ್ವತ್ತ ಮರಕ್ಕೆ ಹೋಲಿಸುತ್ತಾನೆ. ಈ ವೃಕ್ಷವು ಆಸೆ–ಕಾಮನೆಗಳಿಂದ ಬೆಳೆದಿದ್ದು, ಶಾಶ್ವತವಲ್ಲ. ಜ್ಞಾನದಿಂದ ಮಾತ್ರ ಈ ಬಂಧನವನ್ನು ಕಡಿದು ಮುಕ್ತಿ ಪಡೆಯಬಹುದು. ಈ ಆತ್ಮ ಅವಿನಾಶಿ ಎಂದು ವಿವರಿಸುತ್ತಾನೆ.

ದೇಹಕ್ಕೆ ಮಾತ್ರ ಮರಣ, ಆತ್ಮಕ್ಕೆ ಸಾವಿಲ್ಲ, ಜೀವಾತ್ಮ ದೇಹದಿಂದ ಬೇರ್ಪಟ್ಟರೂ ನಾಶವಾಗುವುದಿಲ್ಲ. ಪರಮಾತ್ಮ ಎಲ್ಲರಿಗೂ ಮೂಲ, ಜಗತ್ತನ್ನು ಪ್ರವೇಶಿಸಿ, ಅದನ್ನು ನಿಯಂತ್ರಿಸುವ ಶಕ್ತಿಯೇ ಪರಮಾತ್ಮ. ಇದು ಆತ್ಮನಿಗೂ, ಪ್ರಕೃತಿಗೂ, ಕಾಲಕ್ಕೂ ಮೀರಿದ ಪರಮ ತತ್ತ್ವವಾಗಿದೆ. ಯಾರು ಪರಮಾತ್ಮನ ಪುರುಷೋತ್ತಮತ್ವ ತಿಳಿದುಕೊಳ್ಳುವರೋ, ಯಾರು ಅಶ್ವತ್ತ ವೃಕ್ಷದ ಬಂಧನವನ್ನು ಕಡಿದುಕೊಳ್ಳುವರೋ, ಯಾರು ಶಾಶ್ವತ ತತ್ತ್ವವನ್ನು ಅರಿಯುವರೋ ಅವರು ಮೋಕ್ಷವನ್ನು ಪಡೆಯುತ್ತಾರೆ ಎಂದು ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ್ದಾನೆ.
ಮೋದಿ ತನ್ನ ಭಾಷಣದಲ್ಲಯೂ ಭಗವದ್ಗೀತೆಯ 15ನೇ ಅಧ್ಯಾಯದ ವಿವರಣೆಯನ್ನು ನೀಡಿದ್ದಾರೆ.

error: Content is protected !!