ಬೈಂದೂರು: ಸುಮಾರು 350 ಕೆ.ಜಿ. ತೂಕದ ಬೃಹತ್ ಗಾತ್ರದ ಮಡಲು ಮೀನು ಬೈಂದೂರು ತಾಲೂಕಿನ ಉಪ್ಪುಂದ ಸಮೀಪದ ಮೀನುಗಾರರ ಬಲೆಗೆ ದೊರೆತಿರುವುದಾಗಿ ವರದಿಯಾಗಿದೆ.

ಗಿಲ್‌ನೆಟ್ ಮೀನುಗಾರರ ಬಲೆಗೆ ಬಿದ್ದ ಈ ಮೀನನ್ನು ಮಲ್ಪೆ ಬಂದರಿಗೆ ತರಲಾಯಿತು. ಸುಮಾರು 13 ಅಡಿ ಉದ್ದದ ಈ ಮೀನು 350 ಕೆಜಿ ತೂಕವನ್ನು ಹೊಂದಿದೆ. ಇದನ್ನು ಕೆ.ಜಿ.ಗೆ 70ರೂ.ನಂತೆ ಕೇರಳದ ಮೀನು ವ್ಯಾಪಾರಿಗಳಿಗೆ ಮಾರಾಟ ಮಾಡಲಾಯಿತು. ಸ್ಥಳೀಯವಾಗಿ ಮಡಲು ಎಂದು ಮತ್ತು ಕೇರಳದಲ್ಲಿ ಕಟ್ಟಕಂಬ ಎಂದು ಈ ಮೀನು ಕರೆಯಲ್ಪಡುತ್ತದೆ.

ಮಲೆನಾಡು ಪ್ರದೇಶ ಮತ್ತು ಕೇರಳದಲ್ಲಿ ಈ ಜಾತಿಯ ಮೀನಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಎಸ್‌ಕೆಆರ್‌ಸಿಬಿ ಪಕ್ಷದ ಸುರೇಶ್ ತಿಳಿಸಿದ್ದಾರೆ.