ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಕಂಕನಾಡಿ ನಗರದ ಠಾಣೆಯ ಪೊಲೀಸರು ಅಡ್ಯಾರ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ಮತ್ತಾತನಿಗೆ ಜಯಣ್ಣ ಯಾನೆ ಶೇಖರ್ ಅಡ್ಯಾರ್‌ರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುದು ಗ್ರಾಮದ ಅಮ್ಮೆಮ್ಮಾರ್ ಹೌಸ್ ನಿವಾಸಿ ಮುಹಮ್ಮದ್ ಇಕ್ಬಾಲ್ (48) ಬಂಧಿತ ಚಾಲಕ. ಮರಳು ತರಲು ಸೂಚಿಸಿದ್ದ ಜಯಣ್ಣ ಯಾನೆ ಶೇಖರ್ ಅಡ್ಯಾರ್‌ರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆ 10ಕ್ಕೆ ಅಡ್ಯಾರ್ ಕಟ್ಟೆ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನವನ್ನು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರು. ಅದರಂತೆ ಚಾಲಕ ವಾಹನ ನಿಲ್ಲಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಸುತ್ತುವರಿದ ಪೊಲೀಸರು ಆತನನ್ನು ಹಿಡಿದು ವಾಹನ ಪರಿಶೀಲಿಸಿದಾಗ ಮರಳು ಕಂಡು ಬಂದಿದೆ.

ಪಿಕಪ್ ವಾಹನದ ಮೌಲ್ಯ 6,00,000 ರೂ. ಹಾಗೂ ಮರಳಿನ ಮೌಲ್ಯ 6,500 ರೂ. ಎಂದು ಅಂದಾಜಿಸಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ರಾಜ್ಯ ಸರಕಾರಕ್ಕೆ ರಾಜಧನ ಪಾವತಿಸದೆ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಪಿಕಪ್‌ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.