ಅಯ್ಯಪ್ಪನ ಸನ್ನಿಧಾನಕ್ಕೆ ಭೇಟಿ ನೀಡುವ ಭಕ್ತರು ಕಪ್ಪು ಬಟ್ಟೆ ಧರಿಸುವುದೇಕೆ..?

ಅಯ್ಯಪ್ಪ ಮಾಲಾಧಾರಿಗಳು ಶಬರಿಮೆಲೆಗೆ ಬಂದು 18 ಮೆಟ್ಟಿಲುಗಳನ್ನು ಏರಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಆದರೆ ಅಯ್ಯಪ್ಪನ ಸನ್ನಿಧಾನಕ್ಕೆ ಬರುವ ಭಕ್ತಾಧಿಗಳು ಕಪ್ಪು ಬಟ್ಟೆ ಧರಿಸುವುದೇಕೆ? ಇದರ ಹಿಂದಿರುವ ಕಥೆಯೇನು?

ಮಾಲಾಧಾರಣೆಯಾದ ಭಕ್ತರು ಕಪ್ಪು ಪಂಚೆ, ಶಲ್ಯಾ ಧರಿಸಿರುತ್ತಾರೆ. ಅಯ್ಯಪ್ಪ ಸ್ವಾಮಿ ಭಕ್ತರು ಕಪ್ಪು ಬಟ್ಟೆ ಧರಿಸುವುದಕ್ಕೆ ಪುರಾಣದಲ್ಲಿ ಒಂದು ಕಥೆಯೇ ಇದೆ.

ಅಯ್ಯಪ್ಪ ಶನೀಶ್ವರ ದೇವರಿಗೆ ನೀಡಿದ ಆಶ್ವಾಸನೆಯ ಪ್ರಕಾರ, ತನ್ನ ಭಕ್ತರಿಗೆ ಕಠಿಣ ಉಪವಾಸದ ನಿಯಮವನ್ನು ವಿಧಿಸಿರುವುದೆಂಬುದಾಗಿ ಒಂದು ನಂಬುಗೆ ಇದೆ. ಎರಡು ಬಾರಿ ತಣ್ಣೀರಿನಲ್ಲಿ ಸ್ನಾನ ಮಾಡಿ, ಕಪ್ಪು ಬಟ್ಟೆ ಧರಿಸಿ, ಒಂದು ಹೊತ್ತಿನ ಊಟ ಮಾಡಿ, ಬರಿ ನೆಲದ ಮೇಲೆ ಮಲಗಿ, ಬೆಟ್ಟದ ಮೇಲೂ ಬರಿಗಾಲಿನಲ್ಲಿ ನಡೆದು ಶಬರಿಮಲೆ ದರ್ಶನ ಮಾಡುವಂತಹದ್ದು ವ್ರತದ ವಿಧಾನವಾಗಿದೆ.

ಶಬರಿಮಲೆ ಅಯ್ಯಪ್ಪನಿಗೆ ಮಾಲೆ ಧರಿಸಿ ಉಪವಾಸ ಮಾಡುವವರು ಕಡ್ಡಾಯವಾಗಿ ಕಪ್ಪು ಬಟ್ಟೆಯನ್ನು ಧರಿಸಬೇಕು. ಅಯ್ಯಪ್ಪ ಭಕ್ತರು ಕಪ್ಪು ಬಟ್ಟೆಯನ್ನು ಧರಿಸಲು ಮುಖ್ಯ ಕಾರಣವೆಂದರೆ ಶನೀಶ್ವರ ದೇವರಿಗೆ ಅಯ್ಯಪ್ಪ ನೀಡಿದ ಪ್ರಮಾಣ. ಶನಿಯ ನೆಚ್ಚಿನ ಬಣ್ಣ ಕಪ್ಪು. ಅದಕ್ಕಾಗಿಯೇ ಹಲವು ವರ್ಷಗಳಿಂದ ಶಬರಿಮಲೆಗೆ ಭೇಟಿ ನೀಡುತ್ತಿರುವ ಅಯ್ಯಪ್ಪ ತನ್ನ ಭಕ್ತರಿಗೆ ಶನಿ ದೇವರಿಂದ ಉಂಟಾಗುವ ತೊಂದರೆಗಳಿಂದ ರಕ್ಷಿಸಲು ಕಪ್ಪು ಬಟ್ಟೆಯನ್ನು ಧರಿಸುವಂತೆ ಆದೇಶಿಸಿದ್ದಾರೆ.

ಒಂದು ದಿನ ಶನಿದೇವರು ತಮ್ಮ ಭಕ್ತನೊಬ್ಬನನ್ನು ಭೇಟಿ ಮಾಡಲು ಹೋಗುತ್ತಿದ್ದಾಗ, ದಾರಿಯಲ್ಲಿ ಅಯ್ಯಪ್ಪ ಸ್ವಾಮಿಯನ್ನು ಎದುರಾದರು. ಅಯ್ಯಪ್ಪ ಸ್ವಾಮಿ ಕೇಳಿದರು, “ಶನೀಶ್ವರಾ, ನೀವು ಏಕೆ ನನ್ನ ಭಕ್ತರನ್ನು ಇಷ್ಟು ಕಠಿಣವಾಗಿ ಶಿಕ್ಷಿಸುತ್ತೀರಿ? ಅವರ ಮೇಲೆ ಸ್ವಲ್ಪ ಕರುಣೆ ತೋರಿಸಿ.” ಅದಕ್ಕೆ ಶನಿದೇವರು, ಬಡವ-ಶ್ರೀಮಂತ, ಭಕ್ತನೆಂಬ ಭೇದವಿಲ್ಲ, ಏಳೂವರೆ ಶನಿಯ ಕಾಲ ಬಂದಾಗ ಭೇದವಿಲ್ಲದೇ ಹಿಡಿಯುತ್ತೇನೆ ಇದು ನನ್ನ ಕರ್ತವ್ಯ ಎಂದು ಹೇಳಿದರು. ಬ್ರಹ್ಮ, ವಿಷ್ಣು, ಶಿವ ತಮ್ಮ ಕಾರ್ಯಗಳನ್ನು ಮಾಡುವಂತೆ ನಾನು ಪ್ರತಿಯೊಬ್ಬರ ಕರ್ಮಕ್ಕೆ ತಕ್ಕ ಶಿಕ್ಷೆ ನೀಡುತ್ತೇನೆ. ನಾನು ಆ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಧರ್ಮ ಉಳಿಯುವುದು ಹೇಗೆ ಎಂದು ಶನೀಶ್ವರ ಕೇಳಿದರು.

ಶಬರಿಮಲೆ ದೇವಸ್ಥಾನ | ಪತ್ತನಂತಿಟ್ಟ

ಶನಿ ದೇವರಿಗೆ ಪ್ರತ್ಯುತ್ತರವಾಗಿ ಅಯ್ಯಪ್ಪ, “ಸರಿ, ಇನ್ನು ಮುಂದೆ ನೀವು ನನಗೆ ನೀಡುವ ಶಿಕ್ಷೆಗಳನ್ನು ಹೇಳಿ, ಮತ್ತು ನನ್ನ ಭಕ್ತರಿಗೆ ಆ ಶಿಕ್ಷೆಗಳನ್ನು ಒಂದೇ ಮಂಡಲ ಅವಧಿಯಲ್ಲಿ ಅನುಭವಿಸಲು ನಾನು ವ್ರತಗಳ ವಿಧಾನಗಳನ್ನು ಸೂಚಿಸುತ್ತೇನೆ.”

ಅದಕ್ಕೆ ಶನೀಶ್ವರನು ಹೇಳಿದನು, ನಾನು ಶನಿಯ ಏಳೂವರೆ ದಿನಗಳನ್ನು, ವಿವಿಧ ಆಹಾರ ಮತ್ತು ಹಣ್ಣುಗಳನ್ನು ತಿನ್ನುವುದನ್ನು ಆನಂದಿಸುವವನು, ದಾರಿಯಿಲ್ಲದೆ ದಾರಿ ತಪ್ಪುವಂತೆ ಮಾಡುತ್ತೇನೆ. ಹೂವಿನ ಹಾಸಿಗೆ ಬಿಟ್ಟು ಹುಲ್ಲು ಹಾಸಿನ ಮೇಲೆ ಮತ್ತು ಬಂಡೆಯ ಮೇಲೆ ಮಲಗಿಸುತ್ತೇನೆ, ದಂಪತಿಗಳಾಗಿದ್ದರೂ ನನ್ನ ದೃಷ್ಟಿಯಲ್ಲಿ ಅವರು ಬೇರೆಯಾಗುತ್ತಾರೆ. ಧರಿಸಲು ಸರಿಯಾದ ಬಟ್ಟೆಯಿಲ್ಲದೆ, ತಲೆಗೆ ಎಣ್ಣೆಯಿಲ್ಲದೆ, ಕಾಲಿಗೆ ಚಪ್ಪಲಿಯಿಲ್ಲದೆ. ನನ್ನ ಗುರುತಿಗೆ ಸಿಗದಷ್ಟು ವಿಕಾರ, ಸೌಂದರ್ಯ ಮತ್ತು ಶಕ್ತಿಹೀನನಾಗಲು ಕಾರಣವಾಗುತ್ತೇನೆ. ನೀರಲ್ಲಿ ಮುಳುಗದವರನ್ನು ನೀರಿನಲ್ಲಿ ಅಲೆಯುವಂತೆ ಮಾಡುತ್ತೇನೆ. ಇದನ್ನೆಲ್ಲ ಒಂದೇ ಮಂಡಲದಲ್ಲಿ ಹೇಗೆ ದಂಡಿಸುತ್ತೀರಿ ಎಂದು ಶನೀಶ್ವರನು ಕೇಳಿದನು.

ಮೂಗಿಗೆ ನೀರು ತಾಕದಂತೆ ನಿಗಾ ವಹಿಸಿ : ಶಬರಿಮಲೆ ಯಾತ್ರಿಕರಿಗೆ ಎಚ್ಚರಿಕೆ - ಸೋಂಕು  ತಗುಲುವ ಭೀತಿ | Sabarimala Authorities Warn Pilgrims Keep Water Away From  Your Nose | Asianet Suvarna News

ಅದಕ್ಕೆ ಮುಗುಳ್ನಕ್ಕುತ್ತಾ ಅಯ್ಯಪ್ಪ ಸ್ವಾಮಿ ಹೇಳಿದರು, ನೀನು ಹೇಳಿದ ಎಲ್ಲಾ ಶಿಕ್ಷೆಗಳನ್ನು ಕೊಡುತ್ತೇನೆ. ಅಲ್ಲದೆ, ನನ್ನ ಭಕ್ತರು ಮಂಡಲ ವ್ರತದ ಸಮಯದಲ್ಲಿ ಅತ್ಯಂತ ಸರಳವಾದ ಭೋಜನದಿಂದ ತೃಪ್ತರಾಗುತ್ತಾರೆ. ಅವರು ಅಲಂಕಾರಿಕ ಹಾಸಿಗೆಗಳ ಮೇಲೆ ಮಲಗದೆ ನೆಲದ ಮೇಲೆ ಮಲಗುತ್ತಾರೆ. ಹಾಗೆಯೇ ಅವರು ಕಟ್ಟುನಿಟ್ಟಾದ ಬ್ರಹ್ಮಚರ್ಯ ಪ್ರತಿಜ್ಞೆಯನ್ನು ಅನುಸರಿಸುತ್ತಾರೆ ಮತ್ತು ಅವರು ಕಾಡು ಮತ್ತು ಪರ್ವತಗಳ ಮೂಲಕ ಹಾದು ನನ್ನ ನೋಡಲು ಬರುತ್ತಾರೆ. ಯಾವಾಗಲೂ ನನ್ನ ಹೆಸರನ್ನು ಸ್ವಾಮಿ, ಶರಣಂ ಅಯ್ಯಪ್ಪ ಎಂದು ಜಪಿಸುತ್ತಾರೆ ಎಂದು ಹೇಳಿದರು. ಹಾಗೆಯೇ ನಿನ್ನ ಇಷ್ಟದ ಬಣ್ಣ ಕಪ್ಪಾಗಿದ್ದರೆ ನನ್ನ ಭಕ್ತರಿಗೆ ಆ ಕಪ್ಪು ಬಟ್ಟೆಯನ್ನು ತೊಡಿಸುತ್ತೇನೆ, ಪಾದರಕ್ಷೆ ಧರಿಸಲು ಬಿಡುವುದಿಲ್ಲ, ನನ್ನ ಪರಿಕರವಾದ ತುಳಸಿ ಮಣಿ ಮಾಲೆ ಧರಿಸುತ್ತಾರೆ. ಮುಂಜಾನೆ ಮತ್ತು ಸಂಜಾ ಸಮಯದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡಿಸುತ್ತೇನೆ. ನನ್ನ ಭಕ್ತರೆಲ್ಲ ಕಷ್ಟಪಟ್ಟು ಈ ವ್ರತಗಳನ್ನು ಮಾಡಿ ನನ್ನನ್ನು ಭೇಟಿ ಮಾಡಲು ಬರುತ್ತಾರೆ. ಹೀಗಾಗಿ ಅವರ ಮೇಲೆ ನಿಮ್ಮ ದೃಷ್ಟಿ ಇಡಬೇಡಿ. ನನ್ನ ಭಕ್ತರ ಮೇಲೆ ಕರುಣೆ ಮತ್ತು ಕೃಪೆ ತೋರಿ ಶನಿದೇವ ಎಂದು ಅಯ್ಯಪ್ಪ ಮನವಿ ಮಾಡಿದರು.

ಶಬರಿಮಲೆ ಎಕ್ಸ್‌ಪ್ಲೋರಿಂಗ್: ನಿಮ್ಮ ಸಂಪೂರ್ಣ ತೀರ್ಥಯಾತ್ರೆ ಮಾರ್ಗದರ್ಶಿ 2025

ಅಯ್ಯಪ್ಪ ನೀಡಿದ ವಚನಗಳನ್ನು ಶ್ರದ್ಧಾಭಕ್ತಿಯಿಂದ ಸ್ವೀಕರಿಸಿದ ಶನೀಶ್ವರ ದೇವರು, ಅಯ್ಯಪ್ಪನ ಭಕ್ತರ ಮೇಲೆ ತನ್ನ ಕ್ರೂರ ದೃಷ್ಟಿಯನ್ನು ಬೀರದೆ, ಅಂದಿನಿಂದ ಇಂದಿನವರೆಗೂ ಅವರಿಗೆ ಒಳ್ಳೆಯದನ್ನೇ ನೀಡುತ್ತಿದ್ದಾನೆ. ಶನೀಶ್ವರ ಭಗವಂತನ ಕ್ರೂರ ನೋಟದಿಂದ ತನ್ನ ಭಕ್ತರನ್ನು ರಕ್ಷಿಸಲು, ಅಯ್ಯಪ್ಪನು ಶನೀಶ್ವರ ದೇವರು ನೀಡಿದ ಶಿಕ್ಷೆಯನ್ನು ಭಕ್ತರಿಗೆ ಕಠಿಣ ವ್ರತಗಳ ರೂಪದಲ್ಲಿ ನೀಡಿದ್ದಾನೆ ಎಂಬುದು ಪುರಾಣ ಕಥೆಯಾಗಿದೆ.

ಈ ಪುರಾಣ ಕಥೆಯು ಕರ್ಮ ಮತ್ತು ಭಕ್ತಿಯ ಸಮನ್ವಯವನ್ನು ಕಲಿಸುತ್ತದೆ. ಕಠಿಣ ಪರಿಸ್ಥಿತಿಗಳನ್ನು ನಿಷ್ಠೆಯಿಂದ ಸ್ವೀಕರಿಸಿದಾಗ, ಅವು ಮೋಕ್ಷದ ಮಾರ್ಗವಾಗಬಹುದು ಎಂಬುದನ್ನು ಇದು ತೋರಿಸುತ್ತದೆ. ಅಯ್ಯಪ್ಪ ಭಕ್ತರ ಮಂಡಲ ವ್ರತವು ಸ್ವಯಂ-ಶಿಸ್ತು ಮತ್ತು ಸ್ವಯಂ-ಸಾಧನೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.

error: Content is protected !!