ಮುಂಬೈ: ಫ್ಯಾಷನ್ ಇನ್ಫ್ಲುವೆನ್ಸರ್ ಮೀರಾ ರೈ ಚೌಹಾಣ್ ಅವರು ತಮ್ಮ ಇತ್ತೀಚಿನ ಫೋಟೋಶೂಟ್ ಮೂಲಕ ಮತ್ತೊಮ್ಮೆ ಫ್ಯಾಷನ್ ಜಗತ್ತಿನ ಗಮನ ಸೆಳೆದಿದ್ದಾರೆ. ಮಿನಿ ಡ್ರೆಸ್ ತೊಟ್ಟಯ ಗ್ಲಾಮರ್ ಆಗಿ ಕಾಣಿಸುವ ಮೂಲಕ ಸೋಷಿಯಲ್ ಮೀಡಿಯಾಗೆ ಬೆಂಕಿ ಹಚ್ಚಿದ್ದಾರೆ.

ಮೀರಾ ಧರಿಸಿದ ಮಿನುಗುವ ಅಲಂಕೃತ ಮಿನಿ ಡ್ರೆಸ್ ಶೂಟ್‌ನ ಪ್ರಮುಖ ಆಕರ್ಷಣೆಯಾಗಿದ್ದು, ಟೋನ್ ಬೇಸ್‌ನ ಮೇಲೆ ಹೊಳೆಯುವ ಕಲ್ಲುಗಳು ಮತ್ತು ಮಿನುಗುವ ಉಡುಗೆ ತೊಟ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಎಷ್ಟು ಬೇಕೋ ಅಷ್ಟೇ ಮೇಕ್ ಮಾಡಿಕೊಂಡು ಕಾಣಿಸಿಕೊಂಡ ಅವರ ಕ್ಲಾಸಿ ಲುಕ್, ಮಾದಕ ಕಣ್ಣುಗಳು ಮತ್ತು ನಸುಗೆಂಪು ತುಟಿಗಳ ಕಾಂಬಿನೇಷನ್ ಅವರ ಉಡುಪನ್ನು ಮತ್ತಷ್ಟು ಹೈಲೈಟ್ ಮಾಡಿದೆ. ಗಾಳಿಯಲ್ಲಿ ತೇಲುವ ಕೂದಲು ಕೂಡ ಆಕೆ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆದಿದೆ.

ಮಕ್ಕಳಂತೆ ಚಿಕ್ಕ ಉಡುಗೆಗಳನ್ನೇ ಬಳಸಿಕೊಂಡ ಮೀರಾ ಫ್ಯಾಷನ್ ವಲಯದಲ್ಲಿ ಪ್ರಶಂಸೆ ಗಳಿಸಿದ್ದಾರೆ. ಮೀರಾ ರೈ ಚೌಹಾಣ್ ಇತ್ತೀಚಿನ ದಿನಗಳಲ್ಲಿ ಆಕರ್ಷಕ ಶೈಲಿ, ಆತ್ಮವಿಶ್ವಾಸ ಮತ್ತು ಆಧುನಿಕ ಸ್ತ್ರೀತ್ವದ ಸಂಕೇತವಾಗಿ ಹೊರಹೊಮ್ಮುತ್ತಿದ್ದಾರೆ. ಫ್ಯಾಷನ್ ಪ್ರಿಯರಿಂದ ಹಿಡಿದು ಡಿಜಿಟಲ್ ಪ್ರೇಕ್ಷಕರವರೆಗೂ, ಅವರ ಹೊಸ ಫೋಟೋಶೂಟ್ ಇದೀಗ ಟ್ರೆಂಡ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ.

