ನ.28: “ಬಾಪಾಚೆ ಪುತಾಚೆ ನಾಂವಿಂ” ಬಹುನಿರೀಕ್ಷಿತ ಕೊಂಕಣಿ ಚಿತ್ರ ಬಿಡುಗಡೆ

ಮಂಗಳೂರು: ವಿಶನ್ ಕೊಂಕಣಿ ನಿರ್ಮಾಣದ ದಾಯ್ಜಿವರ್ಲ್ಡ್ ಫಿಲ್ಮ್ಸ್ ಬ್ಯಾನರಿನಡಿ ತಯಾರಾದ ಬಹುನಿರೀಕ್ಷಿತ ಕೊಂಕಣಿ ಚಿತ್ರ “ಬಾಪಾಚೆ ಪುತಾಚೆ ನಾಂವಿಂ” ಶುಕ್ರವಾರ(ನ.28) ರಂದು ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ತೆರೆಕಾಣಲಿದೆ.

ಚಿತ್ರವು ಈಗಾಗಲೇ ಹಲವು ಪ್ರೀಮಿಯರ್ ಪ್ರದರ್ಶನಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಪ್ರೇಕ್ಷಕರಿಂದ ಹಾಗೂ ಸಿನೆಮಾ ವಿಶ್ಲೇಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಯುವ ಸಾಹಿತಿ, ಪತ್ರಕರ್ತ ಸ್ಟ್ಯಾನಿ ಬೇಳ ಬಾಪಾಚೆ ಪುತಾಚೆ ನಾಂವಿಂ ಚಿತ್ರಕ್ಕೆ ಕಥೆ , ಸಂಭಾಶಣೆ ಬರೆದು, ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂಜಯ್ ರಾಡ್ರಿಗಸ್ ಹಿನ್ನಲೆ ಸಂಗೀತವಿದೆ. ಯುವ ಛಾಯಾಗ್ರಾಹಕ ಜೋಯಲ್ ಶಮನ್ ಕ್ಯಾಮೆರಾ ಚಲಾಯಿಸಿದ್ದಾರೆ. ಉಡುಪಿ, ಪುತ್ತೂರು ಹಾಗೂ ದೇರಳಕಟ್ಟೆಯಲ್ಲಿ ಡಿಸೆಂಬರ್ 5 ರಂದು ಚಿತ್ರವು ತೆರೆಕಾಣಲಿದೆ ಎಂದು ನಿರ್ಮಾಣ ಸಂಸ್ಥೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

error: Content is protected !!