M.R.P.L. ನ C.S.R ವಿಭಾಗದ ನಿಧಿಯಿಂದ ಚೇಳೈರು ರಸ್ತೆ ಡಾಮರೀಕರಣಕ್ಕೆ 64 ಲಕ್ಷ ಮಂಜೂರು

ಮಂಗಳೂರು: ಎಂ.ಆರ್.ಪಿ.ಎಲ್‌ ನ C.S.R ವಿಭಾಗದ ನಿಧಿಯಿಂದ ಚೇಳೈರು ರಸ್ತೆ ಡಾಮರೀಕರಣದ  ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ ಎಂದು ನುಡಿದರು.

ಅವರು ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ 3 ನೇ ವಾರ್ಡಿನ ಚೇಳೈರು ಎಂ.ಆರ್.ಪಿ.ಎಲ್‌ ಕಾಲನಿಯ ರಸ್ತೆ ಡಾಮರೀಕರಣಕ್ಕೆ ಎಂ.ಆರ್.ಪಿ.ಎಲ್‌ ಸಿ.ಎಸ್.ಅರ್ ವಿಭಾಗದ ನಿಧಿಯಿಂದ ಸುಮಾರು 64 ಲಕ್ಷ ಮಂಜೂರುಗೊಂಡಿದೆ ಎಂದರು. ಎಂ.ಆರ್.ಪಿ.ಎಲ್‌ ಸಂಸ್ಥೆಯು ತನ್ನ ಸುತ್ತಲಿನ ಗ್ರಾಮ ಪಂಚಾಯತ್ ನಿಂದ ಬರುವ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಹಾಗೂ ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಉಪಾಧ್ಯಕ್ಷೆ ರೇಖಾ,ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸದಸ್ಯರಾದ ಸುಧಾಕರ ಶೆಟ್ಟಿ, ಸುಕುಮಾರಿ,ಎಂ,ಅರ್,ಪಿ,ಎಲ್ ಎಚ್ ಪಿ ಸಿ ಎಲ್ ನಿರ್ವಸಿತರ ಸಮಿತಿ ,ಮಾಜಿ ಅಧ್ಯಕ್ಷ ಗಂಗಾಧರ ಪೂಜಾರಿ ಬಾಳ ಚೇಳೈರು ಕಾಲನಿ ,ರಮೇಶ್ ಪೂಜಾರಿ ಚೇಳೈರು ಮುಂತಾದವರು ಉಪಸ್ಥಿತರಿದ್ದರು.

error: Content is protected !!