ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಐವರು ವಶಕ್ಕೆ

ಉಡುಪಿ: ಗಂಗೊಳ್ಳಿ ಪೊಲೀಸರು ಕೋಳಿ ಅಂಕಕ್ಕೆ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದುಕೊಂದ ಘಟನೆ ಭಾನುವಾರ(ನ.23) ಗಂಗೊಳ್ಳಿಯ ಆಲೂರು ಮಾವಿನಗುಳಿ ಎಂಬಲ್ಲಿ ಸಂಭವಿಸಿದೆ.

ದಿವಾಕರ(56), ಗಣೇಶ್(40), ಗಣೇಶ್(29), ಪ್ರಶಾಂತ್(37), ಎಚ್.ಬಾಬು(55) ಬಂಧಿತ ಆರೋಪಿಗಳು. ಪೊಲೀಸ್ ದಾಳಿ ವೇಳೆ ಜಯಶೀಲ ಶೆಟ್ಟಿ ಹಾಗೂ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ.

7 ಹುಂಜ, 5 ಕೋಳಿಬಾಳು ಹಾಗೂ 2400ರೂ. ನಗದು, ಏಳು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!