ತೀರ್ಥಹಳ್ಳಿ: ಬಾಳೆಬೈಲು ಆರ್ ಎಂ ಸಿ ಯಾರ್ಡ್ ಬಳಿ ಗ್ಯಾಸ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ(ನ.24) ತಡರಾತ್ರಿ 1:30 ರ ವೇಳೆಗೆ ಸಂಭವಿಸಿದೆ.

ಸುದೀಪ್ ( 25) ಮತ್ತುಸುಧೀಶ್ (30) ಅಪಘಾತಕ್ಕೀಡಾಗಿ ಮೃತಪಟ್ಟ ಯುವಕರು.

ಬೈಕ್ ನಲ್ಲಿದ್ದ ಇಬ್ಬರು ತಮ್ಮ ಜೀವವನ್ನು ಕಳೆದುಕೊಂಡಿದ್ದು, ಈ ಇಬ್ಬರು ಯುವಕರು ಇಂದಿರಾನಗರ ಹಾಗೂ ಯಡೆಹಳ್ಳಿಕೆರೆಯವರು ಎಂದು ತಿಳಿದುಬಂದಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ