ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಬಿದ್ದಿದ್ದರೂ ಸ್ಪಂದಿಸದ ಮೆಸ್ಕಾಂ: ಆರೋಪ

ಮಂಗಳೂರು: ನಗರದ ಬಿಕರ್ನಕಟ್ಟೆಯಿಂದ ಮರೋಳಿ ದೇವಸ್ಥಾನ ಮತ್ತು ಪಂಪವೆಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾನುವಾರ(ನ.23) ರಾತ್ರಿ ವಿದ್ಯುತ್ ತಂತಿ ತುಂಡಾಗಿ ರಸ್ತೆ ಮೇಲೆ ಬಿದ್ದಿರುವ ಬಗ್ಗೆ ಸ್ಥಳೀಯ ಮೆಸ್ಕಾಂ ಜೆಇ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರೂ ಸ್ಪಂದಿಸಲಿಲ್ಲ ಎಂದು ಛಾಯಾಗ್ರಾಹಕ ಸ್ಟ್ಯಾನ್ಲಿ ಬಂಟ್ವಾಳ ಆರೋಪಿಸಿದ್ದಾರೆ.

ಛಾಯಾಗ್ರಾಹಕ ಸ್ಟ್ಯಾನ್ಲಿ, ಭಾನುವಾರ ರಾತ್ರಿ ಸುಮಾರು 8:25ರ ವೇಳೆಗೆ ಮಕ್ಕಳ ಜೊತೆ ಈ ದಾರಿಯಾಗಿ ಮನೆಗೆ ನಡೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತುಂಡಾಗಿ ರಸ್ತೆಯಲ್ಲಿ ಬಿದ್ದಿತ್ತು. ತಕ್ಷಣ ಸ್ಥಳೀಯ ಮೆಸ್ಕಾಂ ಗೆ ವಿಚಾರ ತಿಳಿಸಿದ್ದು, 5 ನಿಮಿಷದ ಬಳಿಕ ವಿದ್ಯುತ್ ಸಂಪರ್ಕ ಕಡಿದು ಹಾಕಲಾಯಿತು. ಅಲ್ಲದೆ ಸಿಬ್ಬಂದಿಯನ್ನು ಕಳುಹಿಸುತ್ತೇನೆ ಎಂದು ಹೇಳಿದ 15 ನಿಮಿಷದ ನಂತರ ಲೈನ್ ಮ್ಯಾನ್ ಕರೆ ಮಾಡಿದಾಗ ತಾನು ನಿರ್ದಿಷ್ಟ ಸ್ಥಳ ಹೇಳಿದರೂ ಬರಲಿಲ್ಲ. ಪೊಲೀಸ್ ಠಾಣೆಗೆ ತೆರಳಿದರೂ ಕರೆ ಸ್ವೀಕರಿಸಲಿಲ್ಲ ಮತ್ತೆ ಲೈನ್‌ಮ್ಯಾನ್‌ಗೆ ಕರೆ ಮಾಡಿದಾಗ ಬೇಜವಾಬ್ದಾರಿತನದಿಂದ ಉತ್ತರಿಸಿದರು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಎಚ್ಚರಿಕೆಯ ಕ್ರಮ ವಹಿಸದಿದ್ದರೆ ಮೆಸ್ಕಾಂನವರ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

error: Content is protected !!