ಮಂಗಳೂರು: ಇತ್ತೀಚೆಗೆ ವೋಟರ್ ಐಡಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು, ಅದಕ್ಕೆ ಕಾರಣವೂ ಇದೆ. ಈ ವೋಟರ್ ಐಡಿಯಲ್ಲಿ ತಂಂದೆಯ ಕಾಲಂನಲ್ಲಿ ʻಗೊತ್ತಿಲ್ಲʼ ಎಂದು ಬರೆಯಲಾಗಿದೆ.

ʻಜಾವಿದ್ ಖಾನ್ʼ ಎಂಬ ಹೆಸರಿನ ವ್ಯಕ್ತಿಯ ವೋಟರ್ ಐಡಿಯಲ್ಲಿ ತಂದೆಯ ಹೆಸರನ್ನು ಇಂಗ್ಲೀಷ್‌ನಲ್ಲಿ ʻGoththilla ́ ಎಂದು ಬರೆಯಲಾಗಿದೆ. ಈ ವೋಟರ್ ಐಡಿಯ ಅಸಲಿಯತ್ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಕಿಡಿಗೇಡಿಗಳು ಇದನ್ನು ಉದ್ದೇಶಪೂರ್ವಕವಾಗಿ ರಚಿಸಿ ಹರಿಬಿಟ್ಟಿದ್ದರೋ ಎಂದು ತಿಳಿದುಬಂದಿಲ್ಲ.
ವೋಟ್ ಚೋರಿ ಬಗ್ಗೆ ಇಡೀ ದೇಶದಲ್ಲಿ ಸುದ್ದಿಯಾಗುತ್ತಿದ್ದಂತೆ ಈ ವೋಟರ್ ಐಡಿ ಕೂಡಾ ವೈರಲ್ ಆಗುತ್ತಿದೆ.

