ಪಡುಪದವು ಯುವಕ ಮಂಡಳಿಯಲ್ಲಿ ಬೃಹತ್ ರಕ್ತದಾನ ಶಿಬಿರ

ಪಡುಪದವು: “ದಾನಗಳಲ್ಲಿ ಶ್ರೇಷ್ಠವಾದುದು ರಕ್ತದಾನ. ಒಂದು ರಕ್ತದ ಬೊತ್ತೆಯಿಂದ ಅನೇಕ ಜೀವಗಳನ್ನು ಉಳಿಸಬಹುದು,” ಎಂದು ಮಂಗಳೂರು ವಿಶೇಷ ಆರ್ಥಿಕ ವಲಯದ ಕಂಪನಿ ಸೆಕ್ರಟರಿ ವೊ. ಫಣಿಭೂಷಣ್ ಹೇಳಿದರು.

ಅವರು ಯುವಕ ಮಂಡಲ ಪಡುಪದವು, ಮಂಗಳೂರು ವಿಶೇಷ ಆರ್ಥಿಕ ವಲಯ, ಅಭ್ಯುದಯ ಭಾರತೀ ಸೇವಾ ಟ್ರಸ್ಟ್ ಗಣೇಶಪುರ, ಜ್ಯೋತಿ ವನಿತಾ ಸೇವಾ ಸಮಾಜ ಪಡುಪದವು, ಹಿಂದು ಧಾರ್ಮಿಕ ಸೇವಾ ಸಮಿತಿ ಪಡುಪದವು ಘಟಕ ಹಾಗೂ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಆಶ್ರಯದಲ್ಲಿ ಪಡುಪದವು ಯುವಕ ಮಂಡಲದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯ ಲಕ್ಷ್ಮೀ ಶೇಖರ ದೇವಾಡಿಗ ವಹಿಸಿದ್ದರು.

ವೇದಿಕೆಯಲ್ಲಿ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಮಧ್ಯ ಶಾಲೆಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಭ್ಯುದಯ ಸೇವಾ ಭಾರತೀ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಕ್ರೇಶ್ ಅಮೀನ್, ಎಂಆರ್‌ಪಿಎಲ್ ಧನಲಕ್ಷ್ಮೀ ಕನ್ಸ್ಟ್ರಕ್ಷನ್ ಮಾಲೀಕರಾದ ರಾಜಾರಾಮ್ ಸಾಲ್ಯಾನ್, ಯುವಕ ಮಂಡಲದ ಗೌರವ ಸಲಹೆಗಾರ ಕರುಣಾಕರ ಶೆಟ್ಟಿ ಪಡುಪದವು, ಗೌರವಾಧ್ಯಕ್ಷ ಉಯಯಕಾಂತ್ ಶೆಣೈ, ಯುವಕ ಮಂಡಲ ಅಧ್ಯಕ್ಷ ಹರೀಶ್ ಭಂಡಾರಿ, ವನಿತಾ ಸೇವಾ ಸಮಾಜದ ಗೌರವಾಧ್ಯಕ್ಷೆ ಶಾಂತ ಶೆಟ್ಟಿ, ವೆನ್‌ಲಾಕ್ ಆಸ್ಪತ್ರೆಗೆ ಸಂಬಂಧಿಸಿದ ವೈದ್ಯಾಧಿಕಾರಿ ಡಾ. ನವೀನ್, ಬ್ಲಡ್ ಬ್ಯಾಂಕ್ ಮ್ಯಾನೇಜರ್ ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೇಮಂತ್ ಅಂಚನ್ ಸ್ವಾಗತಿಸಿ, ಲೋಕನಾಥ್ ಭಂಡಾರಿ ಧನ್ಯವಾದಗಳನ್ನು ಅರ್ಪಿಸಿದರು.

error: Content is protected !!