ಮಂಗಳೂರು: ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ನಿಕಲ್ ಆಕ್ಟಿವಿಟಿ ಸೆಲ್ ಹಾಗೂ CSE, ISE, AI & ML, ECE, CSD ಮತ್ತು CSBS ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಇನ್ನೋವೇಷನ್ ಶೋಕೆಸ್: ಮೇಜರ್ ಪ್ರಾಜೆಕ್ಟ್ ಎಕ್ಸಿಬಿಷನ್–2025” ಮತ್ತು “ಸಿಥೇರಿಯನ್–2025: 24-ಗಂಟೆಗಳ ಹ್ಯಾಕಥಾನ್” ಕಾರ್ಯಕ್ರಮಗಳು ನವೆಂಬರ್ 22–23ರಂದು ಜರುಗಿದವು.

ಉದ್ಘಾಟನಾ ಸಮಾರಂಭವು ಡಾ. ಪಿ. ದಯಾನಂದ ಪೈ – ಪಿ. ಸತೀಶ್ ಪೈ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ MIT ಮಣಿಪಾಲದ ಅಡ್ಜಂಕ್ಟ್ ಪ್ರೊಫೆಸರ್ ಡಾ. ನಿರಂಜನ್ ಯು.ಸಿ. ಮಾತಾಡಿ, ಶಿಕ್ಷಣ ಕ್ಷೇತ್ರದ 3A—Accessibility, Availability ಮತ್ತು Physical Proximity—ಗಳ ಮಹತ್ವವನ್ನು ವಿವರಿಸಿದರು. ತಂತ್ರಜ್ಞಾನದಲ್ಲಿ ಸದಾ ಮುನ್ನಡೆಯುತ್ತಾ ಉದ್ಯಮಶೀಲತೆ ಮತ್ತು ಶ್ರಮದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಪ್ರಾಚಾರ್ಯ ಡಾ. ನಾಗೇಶ್ ಹೆಚ್.ಆರ್. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಹೊಸ ಆವಿಷ್ಕಾರಗಳ ದಾರಿಯಲ್ಲಿ ಮುಂದೆ ಸಾಗಲು ಉತ್ತೇಜಿಸಿದರು. ಕಾಲೇಜಿನ ಇಂಕ್ಯುಬೇಶನ್ ಕೇಂದ್ರವನ್ನಷ್ಟೇ ಬಳಸಿಕೊಂಡು ತಮ್ಮ ಸಂಶೋಧನಾ ಯೋಜನೆಗಳನ್ನು ಸ್ಟಾರ್ಟಪ್ ಮಟ್ಟಕ್ಕೆ ತಲುಪುವಂತೆ ಕರೆ ನೀಡಿದರು. ತಾಂತ್ರಿಕ ಕಾರ್ಯದರ್ಶಿ ಸುಶಾಂತ್ ಸಿಂಗ್ ಸ್ವಾಗತ ಭಾಷಣ ಮಾಡಿದರು ಹಾಗೂ ಡಾ. ಗುರುದೇವ ಎಸ್. ಹಿರೇಮಠ ವಂದನಾ ಸಲ್ಲಿಸಿದರು.
ಪ್ರಾಜೆಕ್ಟ್ ಎಕ್ಸಿಬಿಷನ್‌ನಲ್ಲಿ 122 ಅಂತಿಮ ವರ್ಷದ ಪ್ರಾಜೆಕ್ಟ್‌ಗಳು ಪ್ರದರ್ಶನಗೊಂಡಿದ್ದು, Robosoft, Allegion, Stellium, Novigo Solutions, Durgasoft ಸೇರಿದಂತೆ ವಿವಿಧ ಕಂಪೆನಿಗಳ ಎಂಜಿನಿಯರ್ ಹಾಗೂ ವಿಶ್ಲೇಷಕರು ಮೌಲ್ಯಮಾಪಕರಾಗಿ ಪಾಲ್ಗೊಂಡರು.

24-ಗಂಟೆಗಳ ಹ್ಯಾಕಥಾನ್‌ನಲ್ಲಿ IoT, Cyber Security, Agentic AI ಮತ್ತು Full Stack Development ಎಂಬ ನಾಲ್ಕು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಅಧಿವೇಶನಗಳು ನಡೆದವು. CodeZyng, Kakunje Software, HACFY, Kyndryl Solutions ಮತ್ತು Krishitantra ಸಂಸ್ಥೆಗಳ ತಜ್ಞರು ಮಾರ್ಗದರ್ಶನ ಒದಗಿಸಿದರು. ಒಟ್ಟು 237 ವಿದ್ಯಾರ್ಥಿಗಳು ಹ್ಯಾಕಥಾನ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಸಮಾರೋಪ ಸಮಾರಂಭವು ನವೆಂಬರ್ 23ರಂದು Seminar Hall–1 ನಲ್ಲಿ ನಡೆಯಿತು. ಡೀನ್ (R&D) ಡಾ. ಉದಯಕುಮಾರ ಕೆ. ಶೆಣೈ ಅವರು ಸಮಾಜಮುಖಿ ಆವಿಷ್ಕಾರಗಳತ್ತ ಹೆಜ್ಜೆ ಹಾಕುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಚಾರ್ಯ ಡಾ. ನಾಗೇಶ್ ಹೆಚ್.ಆರ್. ಮತ್ತೊಮ್ಮೆ ತನ್ನ ಪ್ರೇರಣಾದಾಯಕ ಮಾತುಗಳಿಂದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದ ಯಶಸ್ವಿ ಸಂಯೋಜನೆಯನ್ನು ಡಾ. ರಕ್ಷಿತ್ ಎಂ.ಡಿ. ಮತ್ತು ಡಾ. ಗುರುದೇವ ಎಸ್. ಹಿರೇಮಠ ವಹಿಸಿಕೊಂಡಿದ್ದರು. ಒಟ್ಟಾರೆಯಾಗಿ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗೊಳಿಸಿದರು.