ಯಾತ್ರಿಗಳೇ ಎಚ್ಚರ: ಶಬರಿಮಲೆಗೆ ಹೋಗುವ ಮುಖ್ಯ ರಸ್ತೆಯಲ್ಲಿದೆ 8 ಅಪಾಯಕಾರಿ ಸ್ಥಳಗಳು!!!

ಶಬರಿಮಲೆ: ಶಬರಿಮಲೆಗೆ ಹೋಗುವ ಮುಖ್ಯ ರಸ್ತೆಯಲ್ಲಿ 8 ಪ್ರಮುಖ ಅಪಾಯ ಬಿಂದುಗಳು ಗುರುತಿಸಲ್ಪಟ್ಟಿವೆ. ಮನ್ನಾರಕುಲಂಜಿ–ಪಂಬಾ ಮಾರ್ಗದಲ್ಲಿ 3 ಮತ್ತು ಎರುಮೇಲಿ–ಪಂಬಾ ಮಾರ್ಗದಲ್ಲಿ 5 ಅಪಾಯಕಾರಿ ಸ್ಥಳಗಳಿವೆ. ಈ ತಿರುವುಗಳಲ್ಲಿ ಹೆಚ್ಚಿನವು ಕಡಿದಾದ ಇಳಿಜಾರು, ತೀಕ್ಷ್ಣವಾದ ತಿರುವು ಮತ್ತು ದೃಶ್ಯಗೋಚರ ಕುಂದುವುದರಿಂದ ಯಾತ್ರಿಕ ವಾಹನಗಳು ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಶಬರಿಮಲೆಗೆ ಹೋಗುವ ಯಾತ್ರಿಗಳು ಎಚ್ಚರರಿಕೆ ವಹಿಸುವುದು ಸೂಕ್ತ.

ಲಹಾ ಲ್ಯಾಂಪ್ ವಂಚಿ
ತೀಕ್ಷ್ಣ ತಿರುವು ಮತ್ತು ಕಡಿದಾದ ಇಳಿಜಾರಿನಿಂದ ಅತಿ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳ ಇದಾಗಿದೆ. ತಿರುವು ಹತ್ತಿರ ಬಂದಾಗ ಮಾತ್ರ ಗೋಚರಿಸುವುದರಿಂದ ವೇಗದಲ್ಲಿ ಬರುತ್ತಿರುವ ವಾಹನಗಳಿಗೆ ಅಪಾಯ ಹೆಚ್ಚಾಗುತ್ತದೆ. KSRTC ಬಸ್‌ಗಳಲ್ಲಿ ಪದೇಪದೇ ಅಪಘಾತಗಳು ಸಂಭವಿಸಿದ್ದರಿಂದ, ರಸ್ತೆಯನ್ನು ಬೇರ್ಪಡಿಸಲು ಅಳವಡಿಸಿದ ಪ್ಲಾಸ್ಟಿಕ್ ಕಂಬಗಳ ಬಹುತೇಕವು ವಾಹನಗಳಿಂದ ಹಾನಿಗೊಳಗಾಗಿವೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸುರಕ್ಷತಾ ಪರಿಶೀಲನೆಯಲ್ಲಿ ಇವುಗಳನ್ನು ಬದಲಾಯಿಸಲು ಸೂಚನೆ ನೀಡಲಾಗಿತ್ತು. NH 183A ಭಾಗವಾಗಿರುವುದರಿಂದ ಹೆದ್ದಾರಿ ಇಲಾಖೆ ಹೊಸ ಕಂಬಗಳನ್ನು ಅಳವಡಿಸಿದರೂ, ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ ಕಳೆದ ವರ್ಷ ಯಾವುದೇ ದುರಸ್ತಿ ನಡೆಯಲಿಲ್ಲ.

ಲಹಾ ಬೆಂಡ್
ಕಡಿದಾದ ಇಳಿಜಾರು ಮತ್ತು ತೀಕ್ಷ್ಣ ತಿರುವು ಇರುವ ಈ ಸ್ಥಳದಲ್ಲಿ ಹಠಾತ್ ಬ್ರೇಕ್ ಹಾಕುವಾಗ ವಾಹನಗಳು ಉರುಳುವುದು ಸಾಮಾನ್ಯ. ಅಪಾಯ ಕಡಿಮೆ ಮಾಡಲು ಬಂಪ್ ಸ್ಟಾಪ್ ಅಳವಡಿಸಲಾಗಿದ್ದು, ಪಂಬಾದಿಂದ ಹಿಂದಿರುಗುವ ವಾಹನಗಳ ವೇಗ ತಗ್ಗಿಸಲು ಎರಡು ರಂಪಲ್ ಸ್ಟ್ರಿಪ್‌ಗಳು ಮತ್ತು ಮಿನುಗುವ ಎಚ್ಚರಿಕೆ ದೀಪ(blinking light) ಅಳವಡಿಸಲಾಗಿದೆ.

ಕಂಬಕತುಮ್ವಲವ್
ಕಾಡಿನ ಮಧ್ಯದಲ್ಲಿರುವ ಈ ತಿರುವಿನಲ್ಲಿ ಯಾತ್ರಿgL ವಾಹನಗಳು ಉರುಳಿ ಅನೇಕ ಅಪಘಾತಗಳು ಮತ್ತು ಸಾವುಗಳು ಸಂಭವಿಸಿವೆ. ರಾತ್ರಿಯಲ್ಲಿ ಮಂಜಿನಿಂದ ತಿರುವು ಸ್ಪಷ್ಟವಾಗಿ ಕಾಣದಿರುವುದು ಅಪಘಾತಗಳಿಗೆ ಕಾರಣ. ಇಲ್ಲಿ ರಕ್ಷಣಾತ್ಮಕ ಗೋಡೆ ನಿರ್ಮಿಸಲಾಗಿದ್ದು, 200 ಮೀಟರ್ ಉದ್ದದ ಬಂಪ್ ಸ್ಟಾಪ್ ಮತ್ತು ಮಿನುಗುವ ದೀಪ ಅಳವಡಿಸಲಾಗಿದೆ.

ಕಣಮಲ ಅತ್ತಿವಲವ್ (ಎರುಮೇಲಿ–ಪಂಬಾ ಮಾರ್ಗ)
ಪ್ರತಿ ತೀರ್ಥಯಾತ್ರಾ ಋತುವಿನಲ್ಲೂ ಅಪಘಾತ ಹಾಗೂ ಸಾವುಗಳು ಸಂಭವಿಸುವ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಇದು ಪ್ರಮುಖ. ಕಡಿದಾದ ಇಳಿಜಾರು, ತಿರುವು ಮತ್ತು ರಸ್ತೆಯ ಬದಿಯಲ್ಲಿರುವ ದೊಡ್ಡ ಬಂಡೆಯು ಅಪಾಯವನ್ನು ಹೆಚ್ಚಿಸುತ್ತದೆ. ಇಲ್ಲಿವರೆಗೆ 22 ಜೀವಗಳು ಕಳೆದುಕೊಂಡಿದ್ದು, ವಾಹನಗಳು ನಿಯಂತ್ರಣ ಕಳೆದುಕೊಂಡು ಹಳ್ಳಗಳಿಗೆ ಉರುಳುವುದು ಸಾಮಾನ್ಯ. ನಾಟ್‌ಪ್ಯಾಕ್, ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆ ಹಲವು ಬಾರಿ ರಸ್ತೆ ದೋಷಗಳನ್ನು ಸರಿಪಡಿಸಲು ಶಿಫಾರಸು ಮಾಡಿದರೂ, ಯಾವುದೇ ಪ್ರಮುಖ ಕ್ರಮ ಕೈಗೊಳ್ಳಲಾಗಿಲ್ಲ.

ಇಲವುಂಗಲ್–ನರನಂತೋಡಿ ಭಾಗ
ಈ ಪ್ರದೇಶದಲ್ಲಿ ನಾಲ್ಕು ತೀಕ್ಷ್ಣ ತಿರುವುಗಳಿದ್ದು, ಇವು ಅಪಘಾತಗಳಿಗೆ ಕಾರಣವಾಗುತ್ತಿವೆ. ಮಾಸಪೂಜಾ ತಿಂಗಳಲ್ಲಿ ಒಂದೇ ವಾಹನ ಪಲ್ಟಿಯಾಗಿ ಸಾವು ಸಂಭವಿಸಿತ್ತು. ಕಾಡಿನ ಮಧ್ಯದಲ್ಲಿರುವುದರಿಂದ ಇವು ಅತ್ಯಂತ ಅಪಾಯಕಾರಿ ಪ್ರದೇಶಗಳಾಗಿದ್ದರೂ, ರಸ್ತೆಯ ಅಗಲಿಕರಣ ಇದುವರೆಗೆ ಮಾಡಲಾಗಿಲ್ಲ.

ಶಬರಿಮಲೆ ಯಾತ್ರಾ ಸೀಸನ್‌ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಈ ಅಪಾಯ ಸ್ಥಳಗಳಲ್ಲಿ ತುರ್ತು ಸುರಕ್ಷತಾ ಕ್ರಮಗಳು ಕೈಗೊಳ್ಳಬೇಕೆಂದು ಯಾತ್ರಿಕರು ಮತ್ತು ಸ್ಥಳೀಯ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ.

error: Content is protected !!