ಕುಂಪಲ: ವೃದ್ಧನ ಪ್ರಾಣ ತೆಗೆದ ಬೀದಿನಾಯಿ ಸೆರೆ! ಆತಂಕಕಾರಿ ಘಟನೆಗೆ ಬೆಚ್ಚಿಬಿದ್ದ ನಾಗರಿಕರು!!

ಮಂಗಳೂರು: ಉಳ್ಳಾಲ ವ್ಯಾಪ್ತಿಯ ಕುಂಪಲದ ಬಳಿ ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಕಾಡುಪ್ರಾಣಿ ದಾಳಿಯ ಶಂಕೆ ವ್ಯಕ್ತವಾಗಿತ್ತು. ಆದರೆ ನಂತರ ಸ್ಥಳೀಯರ ಹೇಳಿಕೆ ಮತ್ತು ವೈದ್ಯಕೀಯ ತನಿಖೆಯ ಆಧಾರದಲ್ಲಿ ಅದು ಬೀದಿನಾಯಿಯ ದಾಳಿಯಿಂದಾದ ಸಾವು ಎನ್ನುವುದು ಬಯಲಾಗಿದೆ. ಬಾಯಿ ಮತ್ತು ದೇಹದಲ್ಲಿ ರಕ್ತಸಿಕ್ತಗೊಂಡಿದ್ದ ನಾಯಿ ಸ್ಥಳದಲ್ಲಿ ಕಂಡುಬಂದಿದ್ದು ಅದನ್ನು ಸೆರೆಹಿಡಿಯುವ ಕಾರ್ಯಾಚರಣೆ ನಡೆಸಲಾಗಿದೆ. ಈ ಆತಂಕಕಾರಿ ಘಟನೆಯಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.


ರಾಮ ಗಟ್ಟಿ ಅವರ ಪುತ್ರ ದಯಾನಂದ (60) ಮೃತಪಟ್ಟವರು. ನಸುಕಿನ ಸುಮಾರು 3 ಗಂಟೆಯ ವೇಳೆಗೆ ಸ್ಥಳೀಯರು ದಯಾನಂದ ಅವರು ನಡೆದುಕೊಂಡು ಹೋಗುತ್ತಿರುವುದನ್ನು ಕಂಡಿದ್ದರು. ಬಳಿಕ ಕೆಲಗಂಟೆಗಳಲ್ಲೇ ಅವರು ಮೃತಪಟ್ಟಿರುವುದು ಕಂಡುಬಂದಿತ್ತು.

ಘಟನಾ ಸ್ಥಳದಲ್ಲಿ ಕಂಡುಬಂದ ಗಾಯಗಳ ಸ್ವರೂಪದಿಂದ ಕಾಡುಪ್ರಾಣಿಯ ದಾಳಿಯ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದರು. ಘಟನೆ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮುಂದುವರೆಸಿದ್ದು, FSL ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಜೊತೆಗೆ ಫೊರೆನ್ಸಿಕ್ ವೈದ್ಯರನ್ನು ಸಹ ಮರಣೋತ್ತರ ಪರೀಕ್ಷೆ ಮತ್ತು ತಾಂತ್ರಿಕ ಅಭಿಪ್ರಾಯಕ್ಕಾಗಿ ಕರೆಸಲಾಗಿತ್ತು.

ಘಟನೆ ಕುರಿತು ಸ್ಥಳೀಯವಾಗಿ ಊಹಾಪೋಹಗಳು ಹಬ್ಬಿದ್ದು ಈ ಬಗ್ಗೆ ಯಾರೂ ಕಿವಿಗೊಡದಂತೆ ಮತ್ತು ಹೆಚ್ಚಿನ ಮಾಹಿತಿ ಇದ್ದರೆ ಚರ್ಚಿಸುವಂತೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಮನವಿ ಮಾಡಿದ್ದಾರೆ.

ಕುಂಪಲ: ವೃದ್ಧನ ಮೇಲೆ ಕಾಡುಪ್ರಾಣಿ ದಾಳಿ!? ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆ

error: Content is protected !!